ಮಂಗಳೂರಿನ ಕುಡುಂಬೂರು ರವಿ ಹೊಳ್ಳ ಮತ್ತು ಪಾವನ.ಆರ್.ಹೊಳ್ಳ ಅವರ ಮುದ್ದಿನ ಮಗಳಾಗಿ 10.02.2007 ರಂದು ಅಭಿನವಿ ಹೊಳ್ಳ ಅವರ ಜನನ. ಗೋವಿಂದ ದಾಸ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ಕಾಮರ್ಸ್ ಶಿಕ್ಷಣವನ್ನು ಓದುತ್ತಿದ್ದರೆ. ಬಾಲ್ಯದಲ್ಲಿ ಮನೆಯ ಹಿಂದೆ ಯಕ್ಷಗಾನ ನಡೆಯುತಿತ್ತು, ಹೀಗೆ ನಡೆದ ಯಕ್ಷಗಾನದ ಸಿಡಿ ಇವರಿಗೆ ಸಿಕ್ಕಿತು ಶಾಲೆಯಿಂದ ದಿನ ಮನೆಗೆ ಬಂದು ಯಕ್ಷಗಾನದ ಸಿಡಿಯನ್ನು ಹಾಕಿ ಯಕ್ಷಗಾನ ವೇಷಧಾರಿಗಳು ಕುಣಿಯುವ ಹಾಗೆ ಕುಣಿಯುತಿದ್ದೆ ಹಾಗೇ ಯಕ್ಷಗಾನದ ಮೇಲೆ ಒಲವು ಮಾಡಿತು ಆಗ ತಂದೆ ಹಾಗೂ ತಾಯಿ ಹತ್ತಿರ ಹೇಳಿದೆ ಆಗ ಯಕ್ಷ ಗುರು ರಾಕೇಶ್ ರೈ ಅಡ್ಕ ಅವರ ಬಳಿ ಮಾತನಾಡಿ ಯಕ್ಷಗಾನ ಕಲಿಯಲು ಪ್ರಾರಂಭಿಸಿದೆ. ಚಂದ್ರಶೇಖರ್ ಧರ್ಮಸ್ಥಳ ಹಾಗೂ ಪ್ರಶಾಂತ್ ಶೆಟ್ಟಿ ನೆಲ್ಯಾಡಿ ಅವರ ಪಾತ್ರ ಹಾಗೂ ವೇಷ ತುಂಬಾ ಇಷ್ಟ ಅವರ ಪಾತ್ರ ಹಾಗೂ ವೇಷಗಳು ನಾನು ಯಕ್ಷಗಾನ ಕಲಿಯಲು ಸ್ಪೂರ್ತಿ ಹಾಗೂ ಪ್ರೇರಣೆ.
ಕುಮಾರ ವಿಜಯ, ದೇವಿ ಮಹಾತ್ಮೆ, ಶ್ರೀನಿವಾಸ ಕಲ್ಯಾಣ, ಗಿರಿಜಾ ಕಲ್ಯಾಣ, ಕಾಳಿಂಗ ಮಧ೯ನ, ಕನಕಾಂಗಿ ಕಲ್ಯಾಣ, ಕುರುಕ್ಷೇತ್ರ, ಮಾನಿಷಾದ, ಇತ್ಯಾದಿ ನೆಚ್ಚಿನ ಪ್ರಸಂಗಗಳು.
ಅಭಿಮನ್ಯು, ಲೋಹಿತಾಶ್ವ, ವಿಷ್ಣು, ಕೃಷ್ಣ, ಷಣ್ಮುಖ, ದೇವವ್ರತ, ಮೈಂದ ದ್ವಿವಿದ, ಕೃಷ್ಣನ ಮಡದಿ, ರೂಕ್ಷ, ಸೇನಾನಿ, ರಾಮ, ಲವ ‐ಕುಶ, ಯಕ್ಷ, ಇತ್ಯಾದಿ ನೆಚ್ಚಿನ ವೇಷಗಳು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ತಿಳಿದು, ಹಾಗೂ ಪ್ರಸಂಗ ನಡೆಯನ್ನು ಗುರುಗಳು ಹತ್ತಿರ ಹಾಗೂ ಹಿರಿಯ ಕಲಾವಿದರ ಹತ್ತಿರ ಕೇಳಿಕೊಂಡು ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಅಭಿನವಿ.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಜಾಸ್ತಿ ತಿಳಿಯದು ಹಾಗೂ ಪ್ರೇಕ್ಷಕರ ಪ್ರೋತ್ಸಾಹವೇ ನನಗೆ ಆಶೀರ್ವಾದ.
ಇನ್ನೂ ಹೆಚ್ಚು ಪಾತ್ರಗಳನ್ನು ಮಾಡಲು ಆಸೆ ಹಾಗೂ ರಂಗದಲ್ಲಿ ಬರುವ ಬೇರೆ ಬೇರೆ ವೇಷಗಳನ್ನು ನೋಡಿ ಕಲಿತು ಮಾಡಬೇಕು ಎಂಬ ಯೋಜನೆ ಇದೆ.
ಧರ್ಮಸ್ಥಳ ಮೇಳ, ಕಟೀಲು ಮೇಳ , ಬಪ್ಪನಾಡು ಮೇಳ, ಸುಂಕದಕಟ್ಟೆ ಮೇಳ , ಕೊಲ್ಲಂಗಾನ ಮೇಳ, ಕೂಡ್ಲೂ ಮೇಳದಲ್ಲಿ ಸೇವೆಯನ್ನು ಮಾಡಿದ ಅನುಭವ. ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದಿಂದ ಜಗನ್ಮೋಹನ ಅರಮನೆ ಮೈಸೂರಿನಲ್ಲಿ ನಡೆದ ಸತ್ಯಹರಿಶ್ಚಂದ್ರ ಯಕ್ಷಗಾನ ಪ್ರದರ್ಶನದಲ್ಲಿ ಲೋಹಿತಾಶ್ವನಾಗಿ, ಯಕ್ಷ ನಂದನ ಪಿ.ವಿ ಐತಳ್ ಇಂಗ್ಲಿಷ್ ಯಕ್ಷಗಾನದಲ್ಲಿ ಅನೇಕ ಪಾತ್ರವನ್ನು ಮಾಡಿದ ಅನುಭವ.
ನಿಮಗೆ ಸಿಕ್ಕಿರುವ ಸನ್ಮಾನ ಹಾಗೂ ಪ್ರಶಸ್ತಿ:- 1 ರಿಂದ 5ನೇ ತರಗತಿವರೆಗೂ ಪ್ರತಿಭಾ ಕಾರಂಜಿಯಲ್ಲಿ ಕ್ಲಸ್ಟರ್, ತಾಲೂಕು, ಜಿಲ್ಲಾ ಮಟ್ಟಗಳಲ್ಲಿ ಬಹುಮಾನ ಲಭಿಸಿದೆ , ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ, ಕುಂಬ್ಳೆ ಸೀಮೆಯ ಕಣಿಪುರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಯಕ್ಷಗಾನ ಬಾಲ ಪ್ರತಿಭೆ ಪುರಸ್ಕಾರ, ಶಿವಮೊಗ್ಗದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಮತ್ತು ಕುವೆಂಪು ಉತ್ಸವದಲ್ಲಿ ಪುರಸ್ಕಾರ ಇವರಿಗೆ ದೊರೆತಿರುತ್ತದೆ. ಭರತನಾಟ್ಯ, ಸಂಗೀತ, ಭಜನೆ ಇವರ ಹವ್ಯಾಸಗಳು.
ಅಪ್ಪ ಹಾಗೂ ಅಮ್ಮ ಪ್ರೋತ್ಸಾಹ ಹಾಗೂ ಪ್ರೇರಣೆ, ಗುರುಗಳ ಮಾರ್ಗದರ್ಶನ ಹಾಗೂ ಆಶೀರ್ವಾದದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಅಭಿನವಿ.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು