ಉಡುಪಿ : ಪ್ರತಿ ವರ್ಷದಂತೆ ಮಕರ ಸಂಕ್ರಾಂತಿಯ ಪುಣ್ಯ ದಿನ ದಿನಾಂಕ 14-01-2024ರಂದು ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವತಿಯಿಂದ ನಡೆಯುತ್ತಿರುವ ಸಮುದ್ರ ಮಧ್ಯದಲ್ಲಿರುವ ಮಲ್ತಿ ದ್ವೀಪದಲ್ಲಿನ ಶೀ ಆದಿಪರಾಶಕ್ತಿ ಸನ್ನಿಧಾನದಲ್ಲಿ ಮಕರ ಸಂಕ್ರಾಂತಿ ಪೂಜೆಯ ನಂತರ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ (ರಿ) ಪೆರ್ಡೂರು ಹಾಗೂ ಮಲ್ಪೆಯ ಮತ್ಸ್ಯರಾಜ್ ಗ್ರೂಪ್ ವತಿಯಿಂದ ಶಿವರಾತ್ರಿ ಸಂದರ್ಭದಲ್ಲಿ ದಿನಾಂಕ 10-03-2024ರಂದು ಉಡುಪಿ ಬನ್ನಂಜೆ ನಾರಾಯಣಗುರು ಆಡಿಟೋರಿಯಂನಲ್ಲಿ ಹಮ್ಮಿಕೊಂಡಿರುವ ಅವಿಭಜಿತ ಉಡುಪಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಭಜನಾ ಸ್ಪರ್ಧೆ ಭಿತ್ತಿ ಪತ್ರ ಅನಾವರಣಗೊಳಿಸುವ ಕಾರ್ಯಕ್ರಮ ನೆರವೇರಿಸಲಾಯಿತು.
ಸಮಿತಿ ಅಧ್ಯಕ್ಷರು ಸತೀಶ್ ಕೋಟ್ಯಾನ್ ಮಲ್ಪೆ, ಕೊಡವೂರು ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸಾಧು ಸಾಲಿಯಾನ್ ಮತ್ತು ಸದಸ್ಯರು, ಮತ್ಸ್ಯರಾಜ್ ಗ್ರೂಪ್ ಮಲ್ಪೆ ಇದರ ಪಾಲುದಾರರು, ಹಿರಿಯ ಪತ್ರಕರ್ತ ನಟರಾಜ್ ಮಲ್ಪೆ, ಹಿರಿಯ ಕಲಾವಿದ ಸುಧೀರ್ ರಾವ್ ಹಾಗೂ ಭೈರವನಾಥೇಶ್ವರ ಸೇವಾ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರ ಸಹಯೋಗದೊಂದಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ಭಿತ್ತಿ ಪತ್ರವನ್ನು ಅನಾವರಣಗೊಳಿಸಿ ಕಾರ್ಯಕ್ರಮಕ್ಕೆ ಶುಭಾಶಯ ಕೋರಿ ಭಗವಂತನನ್ನು ಸ್ತುತಿಸುವ ಸುಲಭ ಮಾರ್ಗವಾದ ಈ ಭಜನಾ ಯಜ್ಞಕ್ಕೆ ಶುಭನಾಂದಿ ಹಾಡಲಾಯಿತು.