ಕಾಸರಗೋಡು : ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ, ಕಾಸರಗೋಡು ಇದರ 35ನೇ ಸಂಸ್ಥಾಪನಾ ವರ್ಷಾಚರಣೆ (04/11/1990 – 04/11/2025)ಯ ಸಂಭ್ರಮದ ಪ್ರಯುಕ್ತ ಕಾಸರಗೋಡು ನಗರ ಸಭೆಯ 8ನೇ ವಾರ್ಡ್ ನ ಕನ್ನಡ ಗ್ರಾಮದಲ್ಲಿ ಇರುವ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ‘ಕನ್ನಡ ಗ್ರಾಮದಲ್ಲಿ ತಿಂಗಳ ಕನ್ನಡ ಉತ್ಸವ’ ಪ್ರತಿ ತಿಂಗಳ 4ನೇ ಆದಿತ್ಯವಾರದಂದು ಅಪರಾಹ್ನ ಗಂಟೆ 3-00ರಿಂದ 6-00ರ ತನಕ ನಿರಂತರವಾಗಿ ಸಾಂಸ್ಕೃತಿಕ, ಸಾಹಿತ್ಯಕ ಮತ್ತು ಸಾಮಾಜಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.
ಕನ್ನಡ ಗ್ರಾಮದಲ್ಲಿ ಸಭಾ ವೇದಿಕೆ, ಆಸನದ ವ್ಯವಸ್ಥೆ, ಧ್ವನಿವರ್ಧಕ ವ್ಯವಸ್ಥೆ ಇರುತ್ತದೆ. ಕನ್ನಡ ಗ್ರಾಮದ ಸಾಂಸ್ಕೃತಿಕ ಭವನದಲ್ಲಿ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜನೆ ಪ್ರದರ್ಶನಕ್ಕಾಗಿ ಸಾಂಸ್ಕೃತಿಕ ಕಲಾತಂಡಗಳ ಸಂಘ ಸಂಸ್ಥೆಗಳಿಗೆ ಅವಕಾಶ ನೀಡಲು ತೀರ್ಮಾನಿಸಿದೆ. ವಿವಿಧ ಉತ್ಸವ ಸಮಾವೇಶ, ಸಾಹಿತ್ಯ ಗೋಷ್ಠಿ, ವಿಚಾರಗೋಷ್ಠಿ, ಕವಿಗೋಷ್ಠಿ, ಸಮೂಹ ಗಾಯನ, ಸಮೂಹ ನೃತ್ಯ, ಯಕ್ಷಗಾನ ತಾಳಮದ್ದಳೆ, ಹರಿಕಥಾ, ಯಕ್ಷಗಾನ ಕಲಾ ವೈಭವ, ಕಾವ್ಯ ಕಮ್ಮಟ, ಸಾಹಿತ್ಯ ಕಮ್ಮಟ, ಚಿತ್ರಕಲಾ, ವ್ಯಂಗ್ಯ ಚಿತ್ರಕಲಾ ಪ್ರದರ್ಶನ ಹಾಗೂ ಸ್ವಉದ್ಯೋಗ, ಶೈಕ್ಷಣಿಕ, ವೈದ್ಯಕೀಯ, ಸರಕಾರದ ಸವಲತ್ತುಗಳ ಮಾಹಿತಿ ಶಿಬಿರ ಮತ್ತು ವಿವಿಧ ಕಾರ್ಯಕ್ರಮಗಳ ಸಂಯೋಜನೆ ಪ್ರಾಯೋಜಕತ್ವವನ್ನು ವಹಿಸುವವರಿಗೆ ಮುಕ್ತ ಅವಕಾಶ ನೀಡಲಾಗುವುದು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಅಭಿನಂದನಾ ಕಾರ್ಯಕ್ರಮಗಳನ್ನು ಏರ್ಪಡಿಸಬಹುದು. ಕಾರ್ಯಕ್ರಮದ ಒಂದು ತಿಂಗಳ ಮುಂಚಿತವಾಗಿ ಹೆಸರು, ವಿಳಾಸ ಪದಾಧಿಕಾರಿಗಳು ಮತ್ತು ಕಾರ್ಯಕ್ರಮದ ವಿವರಗಳನ್ನು ಬರಹದ ಮೂಲಕ ಬರೆದು ಪತ್ರ ಮುಖೇನ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ : ಶಿವರಾಮ ಕಾಸರಗೋಡು, ಅಧ್ಯಕ್ಷರು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ, ಪಾರಕಟ್ಟಿ ರಸ್ತೆ, ಕಾಸರಗೋಡು- 671121. ಮೊಬೈಲ್ : 9448572016 ಅಥವಾ ಕುಶಲ ಕುಮಾರ್ ಕೆ. ಕಾರ್ಯಾಲಯ ಕಾರ್ಯದರ್ಶಿ, ಕನ್ನಡ ಗ್ರಾಮ, ಮೊಬೈಲ್: 9037568983 ಇವರುಗಳನ್ನು ಸಂಜೆ 6-00 ಗಂಟೆಯಿಂದ ರಾತ್ರಿ 9-00 ಗಂಟೆಯವರೆಗೆ ಸಂಪರ್ಕಿಸಬಹುದು.