ಮೈಸೂರು : ಜಗತ್ತಿನ ಸುಪ್ರಸಿದ್ಧ ಮೈಸೂರು ದಸರಾ ಉತ್ಸವ ಪ್ರತೀ ವರ್ಷ ಅದ್ದೂರಿಯಾಗಿ ಆಚರಿಸಲ್ಪಡುತ್ತಿದೆ. ಈ ವರ್ಷ ಕೂಡ ದಿನಾಂಕ 22 ಸೆಪ್ಟೆಂಬರ್ 2025ರಿಂದ 01 ಅಕ್ಟೋಬರ್ 2025ರವರೆಗೆ ‘ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳ – 2025’ವನ್ನು ಮೈಸೂರಿನ ಹಳೆ ಡಿ.ಸಿ. ಕಚೇರಿ ಎದುರು ಇರುವ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಏರ್ಪಡಿಸಲು ಉದ್ದೇಶಿಸಿದೆ.
ಈ ಪುಸ್ತಕ ಮೇಳದಲ್ಲಿ ಪ್ರತೀ ದಿನ ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರ ಸಂಕಿರಣ ಸೇರಿದಂತೆ ಅನೇಕ ಸಾಹಿತ್ಯಕ ಚಟುವಟಿಕೆಗಳನ್ನು ಆಯೋಜಿಸಲಾಗುವುದು. ಇದೇ ಸಂದರ್ಭದಲ್ಲಿ ರಾಜ್ಯದ ಆಸಕ್ತ ಲೇಖಕರು ಹಾಗೂ ಪ್ರಕಾಶಕರು ತಮ್ಮ ಹೊಸ ಪುಸ್ತಕಗಳನ್ನು ಬಿಡುಗಡೆ ಮಾಡಲು ಬಯಸಿದ್ದಲ್ಲಿ ಪುಸ್ತಕ ಬಿಡುಗಡೆ ಮಾಡಲು ಸಹ ಉದ್ದೇಶಿಸಲಾಗಿದೆ. ನಾಡಿನ ಖ್ಯಾತ ಸಾಹಿತಿಗಳು ಪುಸ್ತಕ ಮೇಳದಲ್ಲಿ ಪುಸ್ತಕಗಳನ್ನು ಬಿಡುಗಡೆ ಮಾಡುವರು.
1. ಪುಸ್ತಕ ಬಿಡುಗಡೆ ಮಾಡಲು ಆಸಕ್ತರು ಮೊದಲು ನೋಂದಾಯಿಸಬೇಕು.
2. ಬಿಡುಗಡೆ ಮಾಡಲು ಬಯಸುವ ಪುಸ್ತಕದ ಎರಡು ಪ್ರತಿಯೊಂದಿಗೆ ನಿಗದಿತ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಬೇಕು.
3. ಈ ಪುಸ್ತಕಗಳು ಯಾವುದೇ ವಿವಾದಾತ್ಮಕ ಅಂಶಗಳನ್ನು ಹೊಂದಿರಬಾರದು. ಒಂದು ವೇಳೆ ಪುಸ್ತಕ ಸಂಬಂಧ ಯಾವುದೇ ಕಾನೂನು ತೊಡಕುಗಳು ಉಂಟಾದಲ್ಲಿ ಅದಕ್ಕೆ ಲೇಖಕರು ಹಾಗೂ ಪ್ರಕಾಶಕರೇ ಜವಾಬ್ದಾರರಾಗಿರುತ್ತಾರೆ.
4. ಬಿಡುಗಡೆಗೆ ಪುಸ್ತಕಗಳನ್ನು ಆಯ್ಕೆ ಮಾಡುವ ಅಥವಾ ತಿರಸ್ಕರಿಸುವ ಸಂಪೂರ್ಣ ಅಧಿಕಾರವನ್ನು ಪ್ರಾಧಿಕಾರ ಹೊಂದಿರುತ್ತದೆ.
5. ದಿನಾಂಕ 16 ಸೆಪ್ಟೆಂಬರ್ ರ ನಂತರ ಯಾವುದೇ ಪುಸ್ತಕಗಳನ್ನು ಬಿಡುಗಡೆಗೆ ಸ್ವೀಕರಿಸುವುದಿಲ್ಲ.
6. ಪುಸ್ತಕ ಬಿಡುಗಡೆಗೆ ಬರುವ ಲೇಖಕರು / ಪ್ರಕಾಶಕರುಗಳಿಗೆ ಯಾವುದೇ ಸಂಭಾವನೆ, ಪ್ರಯಾಣ ವೆಚ್ಚ ಸೇರಿದಂತೆ ಇತರೆ ಯಾವುದೇ ಸೌಲಭ್ಯ ಒದಗಿಸಲು ಅವಕಾಶವಿರುವುದಿಲ್ಲ.
7. ಬಿಡುಗಡೆಗೆ ಸ್ವಿಕೃತವಾಗುವ ಪುಸ್ತಕಗಳನ್ನು ಸಂಖ್ಯೆಗೆ ಅನುಗುಣವಾಗಿ ಪುಸ್ತಕ ಮೇಳ ನಡೆಯುವ 09 ದಿನಗಳಿಗೆ ವಿಂಗಡಿಸಿ ಯಾವ ದಿನ ಯಾವ ಲೇಖಕರ ಪುಸ್ತಕಗಳನ್ನು ಬಿಡುಗಡೆ ಮಾಡಲಾಗುವುದೆಂಬ ವಿವರವನ್ನು ಆಯಾ ಲೇಖಕರು / ಪ್ರಕಾಶಕರುಗಳಿಗೆ ತಿಳಿಸಲಾಗುವುದು.
8. ಪುಸ್ತಕ ಬಿಡುಗಡೆಗೆ ಬಯಸುವ ಲೇಖಕರು ತಮ್ಮ ವಿವರಗಳನ್ನು ಮಾನ್ಯ ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರ ದೂರವಾಣಿ ಸಂಖ್ಯೆ: 9448056562ಗೆ ಕಳುಹಿಸಬಹುದಾಗಿದೆ.