ಮಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ಇದರ ವತಿಯಿಂದ ದಿನಾಂಕ 27 ಮತ್ತು 28 ಮಾರ್ಚ್ 2026ರಂದು ಬಂಟ್ವಾಳ ಬಿ.ಸಿ. ರೋಡ್‌ನಲ್ಲಿ ಆಯೋಜಿಸುವ ದಕ್ಷಿಣ ಕನ್ನಡ ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೃತಿ ಬಿಡುಗಡೆಗೆ ಅವಕಾಶ ಕಲ್ಪಿಸಿದ್ದು ಆಸಕ್ತ ಲೇಖಕರು, ಪ್ರಕಾಶಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಯಾವುದೇ ಪ್ರಕಾರದ ಕನ್ನಡ ಪುಸ್ತಕಗಳ ಬಿಡುಗಡೆಗೆ ಅವಕಾಶವಿದೆ. ಆಸಕ್ತರು ಗೀತಾ ಎಸ್. ಕೊಂಕೋಡಿ – 9480367856, ರಜನಿ ಚಿಕ್ಕಯ್ಯ – 7022183946 ಇವರನ್ನು ದಿನಾಂಕ 25 ಫೆಬ್ರವರಿ 2026ರ ಒಳಗೆ ಸಂಪರ್ಕಿಸಿ, ಮಾಹಿತಿ ಪಡೆಯಬಹುದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಎಂ.ಪಿ. ಶ್ರೀನಾಥ ತಿಳಿಸಿದ್ದಾರೆ.
