ಬಾಗಲಕೋಟೆ : ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ.) ಕಮತಗಿ ಹಾಗೂ ವಚನ ವೈಭವ ಮಹಿಳಾ ಜಾನಪದ ಸಾಂಸ್ಕೃತಿಕ ಕಲಾ ಸಂಘ (ರಿ.) ಬಾಗಲಕೋಟೆ ಇವರ ಸಹಯೋಗದಲ್ಲಿ ಬಾಗಲಕೋಟೆಯಲ್ಲಿ ದಿನಾಂಕ 25 ಜನವರಿ 2025ರಂದು ‘ಜನಪದ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಮ್ಮೇಳನ ಸರ್ವಾಧ್ಯಕ್ಷರಾದ ರಾಷ್ಟ್ರಪ್ರಶಸ್ತಿ ಜಾನಪದ ಕಲಾವಿದರಾದ ಶ್ರೀಮತಿ ಗುರಮ್ಮ ಸಂಕಿನಮಠ ಇವರಿಗೆ ದಿನಾಂಕ 22 ಜನವರಿ 2025ರಂದು ಸಿರೂರಿನ ಅವರ ನಿವಾಸಕ್ಕೆ ತೆರಳಿ ಪ್ರೀತಿಯಿಂದ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.
ಈ ಸಂಧರ್ಭದಲ್ಲಿ ಕಥೆಗಾರರು ಹಾಗೂ ಶಿಕ್ಷಕರಾದ ಶ್ರೀ ಲಕ್ಷ್ಮಣ ಬಾದಾಮಿ, ಗ್ರಾಮೀಣ ಕಲೆ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಶ್ರೀ ಕಲ್ಲಪ್ಪಣ್ಣ ಭಗವತಿ, ಕಾರ್ಯದರ್ಶಿಗಳಾದ ಶ್ರೀ ಬಸವರಾಜ ಜಡ್ರಾಮಕುಂಟಿ, ಶಿಕ್ಷಕರಾದ ಶ್ರೀ ಎಂ.ಎಸ್. ಕಲ್ಗುಡಿ, ವಕೀಲರಾದ ಶ್ರೀ ಸುಭಾಸ್ ಹುಲ್ಯಾಳ ಹಾಗೂ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ಸದಸ್ಯರಾದ ಶ್ರೀ ವಿನಾಯಕ ಗಡೆದ ಗೌಡರ ಉಪಸ್ಥಿತರಿದ್ದರು. ಈ ಸಮ್ಮೇಳನದಲ್ಲಿ ಪುಸ್ತಕ ಬಿಡುಗಡೆ, ಕಲಾ ಪ್ರದರ್ಶನ, ಭರತನಾಟ್ಯ, ವಿಶೇಷ ಉಪನ್ಯಾಸ, ಕವಿಗೋಷ್ಠಿ ಮತ್ತು ವಿವಿಧ ಕ್ಷೇತ್ರದಲ್ಲಿ ಸೇವೆಗೈದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಎಮ್. ರಮೇಶ ಕಮತಗಿ
9686782774