Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಮಕ್ಕಳಿಂದ ರಾಜ್ಯಮಟ್ಟದ ಕಥೆ-ಕವನ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಹ್ವಾನ
    Book Release

    ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಮಕ್ಕಳಿಂದ ರಾಜ್ಯಮಟ್ಟದ ಕಥೆ-ಕವನ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಹ್ವಾನ

    September 16, 2024No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು (ರಿ.), ಕೇರಳ ರಾಜ್ಯ ಘಟಕ ಕಾಸರಗೋಡು ಇದರ ಆಶ್ರಯದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ ಕಾಸರಗೋಡು ಇದರ ಸಹಯೋಗದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ದಿನಾಂಕ 10 ನವಂಬರ್ 2024 ಆದಿತ್ಯವಾರದಂದು ಒಂದು ದಿನದ ಕೇರಳ ರಾಜ್ಯ ಮಕ್ಕಳ ಪ್ರಥಮ ಸಾಹಿತ್ಯ ಸಮ್ಮೇಳನ-2024ವನ್ನು ಏರ್ಪಡಿಸಲು ನಿರ್ಧರಿಸಲಾಗಿದೆ. ಈ ಸಮ್ಮೇಳನದಲ್ಲಿ ಶಾಲಾ ಮಕ್ಕಳ ಕವಿಗೋಷ್ಠಿ, ಕಾಲೇಜು ವಿದ್ಯಾರ್ಥಿಗಳ ಕವಿಗೋಷ್ಠಿ, ಬಹು ಭಾಷಾ ವಿದ್ಯಾರ್ಥಿಗಳ ಕವಿಗೋಷ್ಠಿ ಮತ್ತು ಮಕ್ಕಳ ಸಾಹಿತ್ಯ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಗೋಷ್ಠಿಯ ಅಧ್ಯಕ್ಷತೆಯನ್ನು ಕನ್ನಡ ವಿದ್ಯಾರ್ಥಿಗಳೇ ವಹಿಸಲಿದ್ದಾರೆ.

    ಶಾಲಾ ಕಾಲೇಜು ವಿದ್ಯಾರ್ಥಿಗಳಾಗಿದ್ದು, ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ, ಕ್ರೀಡಾ ಕ್ಷೇತ್ರಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬಹುಮುಖ ಪ್ರತಿಭೆಯ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವ ಉದ್ದೇಶದಿಂದ, ಪ್ರಾಥಮಿಕ ತರಗತಿಯಿಂದ ಹೈಸ್ಕೂಲು ತನಕ, ಪ್ಲಸ್ ಟು ಅಥವಾ ಪದವಿ ಪೂರ್ವ ತನಕ, ಕಾಲೇಜು ಪದವಿ-ಸ್ನಾತಕೋತ್ತರ ತರಗತಿಗಳವರೆಗಿನ ವಿದ್ಯಾರ್ಥಿಗಳಿಗಾಗಿ ಸ್ವರಚಿತ ಕಥೆ ಮತ್ತು ಕವನಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಕಥೆ ಮತ್ತು ಕವನಗಳ ಬರಹಗಾರರು/ ಲೇಖಕರು /ಕವಿಗಳು ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಕಥೆ, ಕವನ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಸ್ಪರ್ಧೆಗೆ ಕಳುಹಿಸುವ ಕಥೆ, ಕವನಗಳು ಸ್ವತಂತ್ರ ರಚನೆ (ಸ್ವರಚಿತ) ಆಗಿರಬೇಕು. ಈ ಮೊದಲು ಯಾವುದೇ ಪತ್ರಿಕೆ ಮಾಧ್ಯಮಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟ ಅಥವಾ ಪ್ರಸಾರ ಆಗಿರಬಾರದು. ತಮ್ಮ ಬರಹಗಳು ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿರಬೇಕು. ಮಕ್ಕಳು ಬರೆಯುವ ಕಥೆಗೆ ಗರಿಷ್ಠ ಮಿತಿ ಕೈ ಬರಹದ ಐದು ಪುಟಗಳು ಕವನಗಳು 12 ಸಾಲಿಗೆ ಮೀರಬಾರದು.

    ಕಾಸರಗೋಡು ಜಿಲ್ಲೆ ಸಹಿತ ಕೇರಳ ರಾಜ್ಯದ ಕನ್ನಡದ ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ಹಾಗೂ ಕಾಸರಗೋಡು ಜಿಲ್ಲೆಯ ಕನ್ನಡ ಮಾಧ್ಯಮದಲ್ಲಿರುವ ಶಿಕ್ಷಕರ ತರಬೇತಿ ಸಂಸ್ಥೆ, ಸರಕಾರಿ ಕಾಲೇಜುಗಳು, ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯಗಳು, ಕಣ್ಣೂರು ವಿಶ್ವವಿದ್ಯಾನಿಲಯ ಹಾಗೂ ಮ್ಯಾನೇಜ್ ಮೆಂಟ್, ಖಾಸಗಿ ಶಾಲಾ ಕಾಲೇಜಿನ ಕನ್ನಡ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.

    ಕಾಸರಗೋಡು ಜಿಲ್ಲೆ ಸಹಿತ ಕೇರಳ ರಾಜ್ಯದ ಪ್ರತಿ ಶಾಲಾ ಕಾಲೇಜಿನ ಪ್ರತಿಭಾವಂತ 10 ಮಂದಿ ವಿದ್ಯಾರ್ಥಿಗಳು ಪ್ರತಿನಿಧಿಗಳಾಗಿ ಭಾಗವಹಿಸಬಹುದು. ಆದರೆ ಮುಂಚಿತವಾಗಿ ತಮ್ಮ ಹೆಸರು, ಶಾಲಾ ಕಾಲೇಜಿನ ಹೆಸರು, ಮುಖ್ಯಸ್ಥರ ದೃಢೀಕರಣ ಪತ್ರದೊಂದಿಗೆ ಪ್ರಥಮ ಪ್ರಾಶಸ್ತ್ಯದೊಂದಿಗೆ ನೋಂದಣಿಗೊಳಿಸಬೇಕು. ಎಲ್ಲಾ ಪ್ರತಿನಿಧಿಗಳಿಗೆ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಉಟೋಪಚಾರದ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಕಥೆ ಕವನ ಬರೆಯುವ ವಿದ್ಯಾರ್ಥಿಗಳು ಮತ್ತು ಶಾಲಾ ಕಾಲೇಜಿನ ಪ್ರತಿನಿಧಿಗಳಾಗಿ ಪಾಲ್ಗೊಳ್ಳುವ ಆಸಕ್ತ ವಿದ್ಯಾರ್ಥಿಗಳು ತಮ್ಮ ಶಾಲಾ ಕಾಲೇಜಿನ ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರು, ವಿವಿಧ ವಿಭಾಗದ ಮುಖ್ಯಸ್ಥರ ಶಿಫಾರಸ್ಸು ಪತ್ರದೊಂದಿಗೆ ವಿದ್ಯಾರ್ಥಿಗಳ ಹೆಸರು, ಶಾಲಾ ಕಾಲೇಜಿನ ವಿಳಾಸ, ಮನೆ ವಿಳಾಸ, ತರಗತಿ, ಜನ್ಮ ದಿನಾಂಕ, ತಿಂಗಳು, ವರ್ಷ, ವಯಸ್ಸು, ಆಧಾರ್ ಕಾರ್ಡ್ ನ ಜೆರಾಕ್ಸ್ ಪ್ರತಿ, ತಂದೆ ತಾಯಿಯ ಹೆಸರು, ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಮೊಬೈಲ್ ಸಂಖ್ಯೆ ಹಾಗೂ ಚುಟುಕು ಸಾಧನಾ ಪರಿಚಯ ಪತ್ರದೊಂದಿಗೆ ಅಂಚೆ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಬೇಕು.

    ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಾ ವಿಜೇತರಿಗೆ ಹಾಗೂ ಶಾಲಾ, ಕಾಲೇಜಿನ ವಿದ್ಯಾರ್ಥಿಗಳ ಪ್ರತಿನಿಧಿಗಳಿಗೆ ಸಮ್ಮೇಳನದಂದು ಕಾಸರಗೋಡು ಕನ್ನಡ ಗ್ರಾಮಕ್ಕೆ ಬಂದು-ಹೋಗುವ ಬಸ್ಸು ಪ್ರಯಾಣ ವೆಚ್ಚವನ್ನು ನೀಡಲಾಗುವುದಿಲ್ಲ. ತಾವೇ ಪ್ರಯಾಣ ವೆಚ್ಚವನ್ನು ಭರಿಸಬೇಕಾಗುತ್ತದೆ ಆಯಾಯ ಸ್ಪರ್ಧಾ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತದೆ. ಸ್ಪರ್ಧಾ ವಿಜೇತರಿಗೆ ಪ್ರಶಂಸನಾ ಪತ್ರ ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ.

    ವಿ. ಸೂ,:- ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು (ರಿ.) ಇದರ ರಾಜ್ಯ, ಹೊರ ರಾಜ್ಯ ಮತ್ತು ಜಿಲ್ಲಾ ಘಟಕಗಳ ಕನಿಷ್ಠ ತಲಾ ಐದು ಮಂದಿ ಮಕ್ಕಳು ಪ್ರತಿನಿಧಿಗಳಾಗಿ/ ವಿವಿಧ ಗೋಷ್ಠಿಗಳ ಉಪನ್ಯಾಸಕರಾಗಿ ಸಾಹಿತ್ಯ, ಸಾಂಸ್ಕೃತಿಕ ರಾಯಭಾರಿಗಳಾಗಿ ಭಾಗವಹಿಸುವ ಅವಕಾಶವನ್ನು ನೀಡಲಾಗಿದೆ.

    ಕಾಸರಗೋಡು ಜಿಲ್ಲೆ ಸಹಿತ ಕೇರಳ ರಾಜ್ಯ ಹಾಗೂ ಕರ್ನಾಟಕ ರಾಜ್ಯದ ಮಕ್ಕಳಿಂದ ಸಮೂಹ ಕನ್ನಡ ಗೀತಾ ಗಾಯನ, ಸಮೂಹ ನೃತ್ಯ, ಸಮೂಹ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಕ್ಕೆ ವೇದಿಕೆಯಲ್ಲಿ ಅವಕಾಶ ನೀಡಲಾಗುವುದು. ಪ್ರಪ್ರಥಮವಾಗಿ ಮಕ್ಕಳ ಹೆಸರನ್ನು ನೋಂದಾಯಿಸಿದ ಶಾಲಾ, ಕಾಲೇಜುಗಳಿಗೆ ಪ್ರಥಮ ಪ್ರಾಶಸ್ತ್ಯ ನೀಡಲಾಗುವುದು. ಭಾಗವಹಿಸಿದ ಎಲ್ಲಾ ಪ್ರತಿನಿಧಿಗಳಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಗುವುದು.

    ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಿದ ಶಾಲಾ, ಕಾಲೇಜಿನ ಅಧ್ಯಾಪಕರು, ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರು ವಿಶೇಷ ಆಹ್ವಾನಿತರಾಗಿ ಭಾಗವಹಿಸಬಹುದು. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಕಾಸರಗೋಡು ಇದರ ಕಾರ್ಯಕ್ರಮ ಸಂಯೋಜನಾ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.

    ಕಾಸರಗೋಡಿನ ಕನ್ನಡ ಗ್ರಾಮದ ಗುರುತನ್ನು ಗೂಗಲ್ ನಲ್ಲಿ ನೋಡಬಹುದು. ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿ, N H 66- ಒಟ್ಟು ದೂರ 50 ಕಿ.ಮೀ. ಮಂಗಳೂರು ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣದಿಂದ ಕರ್ನಾಟಕ ಮತ್ತು ಕೇರಳ ರಾಜ್ಯದ ಸರ್ಕಾರಿ ಬಸ್ಸುಗಳು ಬೆಳ್ಳಿಗ್ಗೆ ಗಂಟೆ 6.00ರಿಂದ ರಾತ್ರಿ 8.00ರವರೆಗೆ ಪ್ರಯಾಣಕ್ಕೆ ಲಭ್ಯವಿರುತ್ತದೆ. ಕಾಸರಗೋಡು ಹೊಸ ಮುನಿಸಿಪಾಲಿಟಿ ಬಸ್ಸು ನಿಲ್ದಾಣದಿಂದ ಕನ್ನಡ ಗ್ರಾಮಕ್ಕೆ ಆಟೋದಲ್ಲಿ ಬರಬಹುದು ಅಥವಾ ಕಾಸರಗೋಡು-ಮಧೂರು ಬಸ್ಸುಗಳಲ್ಲಿ ಪ್ರಯಾಣಿಸಬಹುದು. ಮೀಪುಗುರಿ ಎಲ್.ಪಿ. ಶಾಲೆಯ ಬಸ್ ಸ್ಟಾಪ್ ಇಲ್ಲಿ ಇಳಿಯಬೇಕು.

    ವಿಳಾಸ : ಶಿವರಾಮ ಕಾಸರಗೋಡು ಅಧ್ಯಕ್ಷರು, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ, ಕನ್ನಡ ಗ್ರಾಮ, ಪಾರೆಕಟ್ಟೆ ಕನ್ನಡ ಗ್ರಾಮ ರಸ್ತೆ, ಕಾಸರಗೋಡು -671121.
    ಮೊಬೈಲ್ : 9448572016/ 9901951965
    ಸಂಪರ್ಕ : ಸಂಜೆ ಗಂಟೆ 6-00ರಿಂದ ರಾತ್ರಿ 9-00ರವರೆಗೆ
    ವಿ.ಸೂ. : ಕರ್ನಾಟಕ ಮತ್ತು ಹೊರ ರಾಜ್ಯದ ಮುಖ್ಯ ಅತಿಥಿಗಳು, ವಿಶೇಷ ಆಹ್ವಾನಿತರು, ಪ್ರತಿನಿಧಿಗಳು, ರಾಜ್ಯ ಜಿಲ್ಲಾ ಘಟಕದ ಅಧ್ಯಕ್ಷರು ತಮ್ಮ ಅಂಚೆ ಪತ್ರವನ್ನು ಈ ವಿಳಾಸಕ್ಕೆ ಕಳುಹಿಸಬಹುದು.
    ಶಿವರಾಮ ಕಾಸರಗೋಡು ಅಧ್ಯಕ್ಷರು, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಕಚೇರಿ, ಮಾಡೂರು ಅಂಚೆ, ಕೋಟೆಕಾರು ಉಳ್ಳಾಲ ತಾಲೂಕು -575022, ಮಂಗಳೂರು, ದ.ಕ. ಜಿಲ್ಲೆ.
    ಮೊಬೈಲ್ : 9448572016, 9901951965
    ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನದಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ಮಕ್ಕಳಿಂದ ಚಿತ್ರ ಬಿಡಿಸುವುದು, ರಸಪ್ರಶ್ನೆ, ಮಕ್ಕಳಿಂದ ಪುಟ್ಟ ಕಥೆ ಸಣ್ಣ ಕಥೆ ಓದುವುದು ಹೇಳುವುದು, ಏಕಪಾತ್ರಾಭಿನಯ, ಮಕ್ಕಳ ಆಟೋಟ ಸ್ಪರ್ಧೆಗಳು, ಮಕ್ಕಳಿಂದ ಕುಣಿತ ಭಜನೆ, ಛದ್ಮವೇಷ ಸ್ಪರ್ಧೆಯನ್ನು ಹಮ್ಮಿಕೊಳ್ಳಲು ಯೋಜನೆಯಿದೆ. ಈ ಕಾರ್ಯಕ್ರಮದಲ್ಲಿ ಮಕ್ಕಳು ಮುಕ್ತವಾಗಿ ಭಾಗವಹಿಸಬಹುದು. ಪಾಲ್ಗೊಂಡ ಮಕ್ಕಳಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗುವುದು. ಮಕ್ಕಳ ಹೆತ್ತವರು ಈ ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಸಿನ್ಸ್ 1999 ಶ್ವೇತಯಾನ-59ರ ಅಂಗವಾಗಿ ‘ಶಾಲೆಗಳಲ್ಲಿ ಒಡ್ಡೋಲಗ’
    Next Article ‘ಚುಟುಕು ಚಿನ್ಮಯಿ’ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ
    roovari

    Comments are closed.

    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಖ್ಯಾತ ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ನಿಧನ

    May 8, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.