Subscribe to Updates

    Get the latest creative news from FooBar about art, design and business.

    What's Hot

    ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ‘ವಿವೇಕಸ್ಮೃತಿ’ ಉಪನ್ಯಾಸ ಕಾರ್ಯಕ್ರಮ

    June 12, 2025

    ವಿಶ್ವಕರ್ಮ ಒಕ್ಕೂಟದಿಂದ ಸಣ್ಣ ಕಥೆ – ಕವನ ಸ್ಪರ್ಧೆ – 2025 | 30 ಜೂನ್ ಕೊನೆಯ ದಿನ

    June 12, 2025

    ಮೈಸೂರಿನಲ್ಲಿ ಪ್ರೇರಣಾ ಕಲಾ ಕಾರ್ಯಾಗಾರ | ಜೂನ್ 28

    June 12, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನಾಟಕ ಅಕಾಡೆಮಿಯಿಂದ ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 25
    Awards

    ನಾಟಕ ಅಕಾಡೆಮಿಯಿಂದ ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 25

    June 11, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿಯಿಂದ ಆಸಕ್ತರಿಂದ ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ನಾಟಕ ಅಕಾಡೆಮಿಯು ರಂಗಭೂಮಿಗೆ ಸಂಬಂಧಿಸಿದಂತೆ ಪ್ರಕಟವಾಗಿರುವ ರಂಗಭೂಮಿಯ ಆಕರ ಗ್ರಂಥಗಳಿಗೆ ಬಹುಮಾನ ನೀಡಲು ತೀರ್ಮಾನಿಸಿದೆ. ಕನ್ನಡ ರಂಗಭೂಮಿಯ ಬೆಳವಣಿಗೆ, ವೈವಿದ್ಯತೆ ಹಾಗೂ ರಂಗಭೂಮಿಯ ಇತಿಹಾಸವನ್ನು ತಿಳಿಸುವಂತಹ ವಿಮರ್ಶಾತ್ಮಕ ಕೃತಿಗಳಿಗೆ 2024-25ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳನ್ನು ಬಹುಮಾನಕ್ಕಾಗಿ ಆಹ್ವಾನಿಸಲಾಗಿದೆ. ಪ್ರತಿ ಸಾಲಿಗೆ ತಲಾ ಒಂದು ಪುಸ್ತಕ ಬಹುಮಾನವನ್ನು ನೀಡಲಾಗುವುದು. ಬಹುಮಾನವು ರೂ.25,000/- ನಗದು ನೀಡಲಾಗುವುದು. ಕೃತಿಯನ್ನು ಲೇಖಕರೇ ನೇರವಾಗಿ ಅಕಾಡೆಮಿಗೆ ಕಳುಹಿಸಿಕೊಡುವುದು. ಕೃತಿಗಳು ಜನವರಿ 2024ರಿಂದ ಡಿಸೆಂಬರ್ 2024ರೊಳಗೆ ಮುದ್ರಣವಾಗಿ ಪ್ರಕಟಣೆಯಾಗಿರಬೇಕು. ಅನುವಾದಿತ ಕೃತಿಗಳಿಗೆ ಅವಕಾಶವಿರುವುದಿಲ್ಲ. ಪುಸ್ತಕಗಳು ಯಾವುದೇ ಪದವಿಗಾಗಿ, ಪಿ.ಎಚ್.ಡಿ. ಮತ್ತು ಪಠ್ಯ ಪುಸ್ತಕಕ್ಕೆ ಸಿದ್ದಪಡಿಸಲಾದ ವಿಷಯವಾಗಿರಬಾರದು. ಬಹುಮಾನಕ್ಕಾಗಿ ಕಳುಹಿಸಲ್ಪಡುವ ಕೃತಿಗಳು ನಾಟಕವಾಗಿರಬಾರದು. ರಂಗಸಂಬಂಧಿ ವಸ್ತುವುಳ್ಳದ್ದಾಗಿರಬೇಕು. ಕೃತಿಯ ತಾಂತ್ರಿಕ ಪುಟದಲ್ಲಿ ಮುದ್ರಣ ವರ್ಷವನ್ನು ನಮೂದಿಸಿರಬೇಕು. ಮರು ಮುದ್ರಣ ಪುಸ್ತಕವಾಗಿರಬಾರದು. ಅಕಾಡೆಮಿಯ ಸದಸ್ಯರು ರಚಿಸಿರುವ ಕೃತಿಗಳಾಗಿರಬಾರದು ಹಾಗೂ ಸಂಪಾದಿತ ಕೃತಿಗಳು ಸಹ ಆಗಿರಬಾರದು. ಕೃತಿಯು ಕನಿಷ್ಠ 60 ಪುಟಗಳನ್ನು ಹೊಂದಿರಬೇಕು. ಪುಸ್ತಕ ಬಹುಮಾನಕ್ಕೆ ಲೇಖಕರು ಮಾತ್ರ ಅರ್ಹರಾಗಿರುತ್ತಾರೆ. ಯಾವುದೇ ಕಾರಣಕ್ಕೂ ಬಹುಮಾನಕ್ಕಾಗಿ ಸಲ್ಲಿಸಲಾಗುವ ಕೃತಿಗಳನ್ನು ಹಿಂತಿರುಗಿಸಲಾಗುವುದಿಲ್ಲ. ಅಕಾಡೆಮಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಆಸಕ್ತ ಲೇಖಕರು, ಹೆಸರು, ವಿಳಾಸ, ಪ್ರಕಟಣೆ ವರ್ಷದೊಂದಿಗೆ ನಾಲ್ಕು ಪ್ರತಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ನಾಟಕ ಅಕಾಡೆಮಿ, ನೆಲಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು – 560002, ದೂರವಾಣಿ ಸಂಖ್ಯೆ 080-22244176 ಇಲ್ಲಿಗೆ ದಿನಾಂಕ 25 ಜೂನ್ 2025ರೊಳಗಾಗಿ ಸಲ್ಲಿಸುವಂತೆ ಕರ್ನಾಟಕ ನಾಟಕ ಅಕಾಡೆಮಿಯ ರಿಜಿಸ್ಟ್ರಾರ್ ತಿಳಿಸಿದ್ದಾರೆ.

    award baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಮುದ್ದಣ ಕಾವ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ | ಸೆಪ್ಟೆಂಬರ್ 15 ಕೊನೆಯ ದಿನಾಂಕ
    Next Article ಜನ ಮೆಚ್ಚುಗೆಗೆ ಪಾತ್ರವಾದ ‘ಚಿಣ್ಣರ ಗಾನ ಸುಧೆ’
    roovari

    Add Comment Cancel Reply


    Related Posts

    ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ‘ವಿವೇಕಸ್ಮೃತಿ’ ಉಪನ್ಯಾಸ ಕಾರ್ಯಕ್ರಮ

    June 12, 2025

    ವಿಶ್ವಕರ್ಮ ಒಕ್ಕೂಟದಿಂದ ಸಣ್ಣ ಕಥೆ – ಕವನ ಸ್ಪರ್ಧೆ – 2025 | 30 ಜೂನ್ ಕೊನೆಯ ದಿನ

    June 12, 2025

    ಬೆಂಗಳೂರಿನ ರಂಗ ಶಂಕರದಲ್ಲಿ ‘ಮಾರೀಕಾಡು’ | ಜೂನ್ 17   

    June 12, 2025

    ಮಂಗಳೂರಿನ ಡಾನ್ ಬೋಸ್ಕೋ ಹಾಲ್ ನಲ್ಲಿ ವಿ. ಹರಿಣಿ ಇವರ ‘ಭರತನಾಟ್ಯ ರಂಗಪ್ರವೇಶ’ | ಜೂನ್ 14

    June 12, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.