ಹುಬ್ಬಳ್ಳಿ : ಅಕ್ಷರ ಸಾಹಿತ್ಯ ವೇದಿಕೆಯು ಕಥೆಗಾರ ಡಾ. ಪ್ರಹ್ಲಾದ ಅಗಸನಕಟ್ಟೆ ಅವರ ಸ್ಮರಣಾರ್ಥ ‘ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಸ್ಪರ್ಧೆ-2025’ ಏರ್ಪಡಿಸಿದೆ. ವಿಜೇತರಿಗೆ ರೂ. ಐದು ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕ ಕೊಡಲಾಗುವುದು.
ವಿದ್ಯಾರ್ಥಿಗಳು ಕಾಗದದ ಒಂದು ಮಗ್ಗುಲಲ್ಲಿ ಅಪ್ರಕಟಿತ ಸ್ವರಚಿತ ಕಥೆ ಕಳುಹಿಸಬೇಕು. ಇ-ಮೇಲ್ ಮೂಲಕವೂ ಕಳುಹಿಸಬಹುದು. ಅದರ ಜೊತೆಗೆ ಪ್ರತ್ಯೇಕವಾಗಿ ಕಾಲೇಜು ಮುಖ್ಯಸ್ಥರ ದೃಢೀಕೃತ ಪ್ರಮಾಣಪತ್ರ ಇರಬೇಕು. ಕಥೆಗಳನ್ನು ಕಳುಹಿಸಲು 30 ಏಪ್ರಿಲ್ ಕೊನೆಯ ದಿನವಾಗಿರುತ್ತದೆ.
ಸಂಪರ್ಕ ವಿಳಾಸ : ‘ಡಾ. ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ವಿದ್ಯಾರ್ಥಿ/ನಿ ಕಥಾಸ್ಪರ್ಧೆ, ಅಕ್ಷರ ಸಾಹಿತ್ಯ ವೇದಿಕೆ, ಹುಬ್ಬಳ್ಳಿ, ಸುನಂದಾ ಪ್ರಕಾಶ ಕಡಮೆ, # 90, ‘ನಾಗಸುಧೆ’ 6/ಬಿ ಕ್ರಾಸ್, ಕಾಳಿ ದಾಸನಗರ, ವಿದ್ಯಾನಗರ ವಿಸ್ತೀರ್ಣ, ಹುಬ್ಬಳ್ಳಿ – 580031. ದೂ. ಸಂಖ್ಯೆ 98457 79387. ಇ-ಮೇಲ್: [email protected]