ಮೈಸೂರು : ಕರ್ಣಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಮಾನ್ಯತೆ ಪಡೆದ ‘ಆರ್.ಟಿ.ಎಂ. ಪ್ರದರ್ಶನ ಕಲೆಗಳ ಅಧ್ಯಯನ ಕೇಂದ್ರ’ ಮೈಸೂರು ಇದರ ವತಿಯಿಂದ ರಂಗಭೂಮಿ (ನಾಟಕ) ಡಿಪ್ಲೋಮಾ 2025-26 ರಂಗಶಿಕ್ಷಣಕ್ಕೆ ಆಸಕ್ತಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇದು ಮೈಸೂರಿನ ರಂಗಯಾನ ಟ್ರಸ್ಟ್ ಸಂಸ್ಥೆಯ ಘಟಕವಾಗಿದೆ.
ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಅಭಿನಯ, ಯಕ್ಷಗಾನ, ರಂಗಗೀತೆ, ಮೇಕಪ್, ಪ್ರಾಪರ್ಟಿ, ಕಾಸ್ಟೋಮ್ ಹಾಗೂ ಮುಂತಾದ ತರಗತಿಗಳು. ರಂಗಭೂಮಿ ಪಠ್ಯದ ಜೊತೆಗೆ ಪ್ರಾಯೋಗಿಕ ತರಗತಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಒಂದು ವರ್ಷದ ತರಬೇತಿಗೆ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ 18 ವರ್ಷಕ್ಕಿಂತ ಮೇಲ್ಪಟ್ಟ ವಯೋಮಿತಿಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಮಯ ಪ್ರತಿದಿನ ಸಂಜೆ ಗಂಟೆ 5-30ರಿಂದ ರಾತ್ರಿ 8-30ರವರೆಗೆ ಮತ್ತು ರಜಾದಿನಗಳಂದು ಪೂರ್ಣದಿನ ತರಬೇತಿ ನಡೆಯಲಿದೆ.
ಅರ್ಜಿ ಸಲ್ಲಿಸಲು ಸಂಸ್ಥೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಾಗೂ ಹೆಚ್ಚಿನ ಮಾಹಿತಿಗಾಗಿ 8147368047, 9844471868 ಸಂಖ್ಯೆಯನ್ನು ಸಂಪರ್ಕಿಸಿರಿ.