ಮೂಡುಬಿದಿರೆ : ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ. 2025-26ನೇ ಸಾಲಿನ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಯಕ್ಷ ಪ್ರಯೋಗಗಳು ಮತ್ತು ಯಕ್ಷಗಾನ ಪ್ರದರ್ಶನಗಳಲ್ಲಿ ಅಭಿನಯಿಸಲು ಕಲಾವಿದರು ಬೇಕಾಗಿರುತ್ತಾರೆ.
ತೆಂಕು ಬಡಗು ಯಕ್ಷಗಾನ ನಾಟ್ಯ ತಾಳಗಳ ಅನುಭವ ಹೊಂದಿರುವ 18ರಿಂದ 28 ವರ್ಷಗಳ ವಯೋಮಿತಿಯ ಆಸಕ್ತರು ತಮ್ಮ ಇತ್ತೀಚಿನ ಭಾವಚಿತ್ರ, ಯಕ್ಷಗಾನ ಪ್ರದರ್ಶನದ ಫೋಟೋ, ತಮ್ಮ ಯಕ್ಷಗಾನ ಅನುಭವದ ಸ್ವವಿವರಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ. ಡಾ. ಎಂ. ಮೋಹನ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡು ಬಿದಿರೆ -574227. ಅರ್ಜಿ ತಲುಪಲು ಕೊನೆಯ ದಿನಾಂಕ 25 ಜೂನ್ 2025 ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 9480529236 ಸಂಖ್ಯೆಯನ್ನು ಸಂಪರ್ಕಿಸಿರಿ.