ಮಡಿಕೇರಿ : ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ 20 ದಿನಗಳ ರಂಗ ತರಬೇತಿ ಶಿಬಿರ ನಡೆಯಲಿದೆ. ರಂಗ ಶಿಬಿರದಲ್ಲಿ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳಿಂದ ಮುಖ್ಯವಾಗಿ ಅಭಿನಯ, ಮಾತುಗಾರಿಕೆ, ರಂಗ ವ್ಯಾಯಾಮ, ಸ್ವರಸಂಸ್ಕಾರ, ರಂಗ ಸಜ್ಜಿಕೆ, ವಸ್ತ್ರ ವಿನ್ಯಾಸ, ಸಂಗೀತ, ಬೆಳಕಿನ ಸಂಯೋಜನೆ, ಮೇಕಪ್ ಮಾತ್ರವಲ್ಲದೆ ಅರೆಭಾಷೆ ಸಾಹಿತ್ಯ, ಸಂಸ್ಕೃತಿ ಕಲಿಕೆಯ ಜೊತೆಗೆ ಪ್ರಸಿದ್ಧ ಅರೆಭಾಷೆ ನಾಟಕದ ಅಭ್ಯಾಸವೂ ಒಳಗೊಂಡಿದೆ.
ಶಿಬಿರದಲ್ಲಿ ಸಿದ್ಧಗೊಂಡ ನಾಟಕದ ಪ್ರದರ್ಶನವನ್ನು ರಾಜ್ಯದ ಮುಖ್ಯ ನಗರಗಳಲ್ಲಿ ಅಕಾಡೆಮಿಯು ಏರ್ಪಡಿಸಲಿದೆ. ಶಿಬಿರದಲ್ಲಿ ಭಾಗವಹಿಸಲು ಕೇವಲ 20 ಮಂದಿ ಕಲಾವಿದರಿಗೆ ಮಾತ್ರ ಅವಕಾಶವಿದ್ದು 16ರಿಂದ 35 ವರ್ಷದೊಳಗಿನ ಪುರುಷ/ ಮಹಿಳಾ ಕಲಾವಿದರು ಭಾಗವಹಿಸಬಹುದು.
ಆಸಕ್ತರು ದಿನಾಂಕ 30 ಮೇ 2025ರ ಒಳಗೆ ತಮ್ಮ ಇತ್ತೀಚಿನ ಭಾವಚಿತ್ರ ಹಾಗೂ ಸ್ವವಿವರಗಳೊಂದಿಗೆ ಅರೆಭಾಷೆ ರಂಗ ಶಿಬಿರ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಡಿಕೇರಿ ಈ ವಿಳಾಸಕ್ಕೆ ಸಲ್ಲಿಸಬೇಕು. ಸ್ಥಳೀಯ ಕಲಾವಿದರಿಗೆ ಮೊದಲ ಆದ್ಯತೆ. ಅರ್ಜಿ ನೋಂದಾಯಿಸಿದ ಕಲಾವಿದರಿಗೆ ಸಂದರ್ಶನ ದಿನಾಂಕವನ್ನು ದೂರವಾಣಿ ಮೂಲಕ ತಿಳಿಸಲಾಗುವುದು. ಆಯ್ಕೆಯಾದವರಿಗೆ ತರಬೇತಿ ಸಂಪೂರ್ಣ ಉಚಿತವಾಗಿದ್ದು, ನಾಟಕದಲ್ಲಿ ಭಾಗಹಿಸುವ ಕಲಾವಿದರಿಗೆ ಗೌರವ ಸಂಭಾವನೆ ನೀಡಲಾಗುವುದು ಎಂದು ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ರಿಜಿಸ್ಟ್ರಾರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿಕೃಪಾ ರಾಜಾಸೀಟ್ ರಸ್ತೆ, ಮಡಿಕೇರಿ -571201 ಹಾಗೂ ದೂರವಾಣಿ ಸಂಖ್ಯೆ : 9611355496, 6363783983ನ್ನು ಸಂಪರ್ಕಿಸಬಹುದು.