ಮಡಿಕೇರಿ : ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿಯಿಂದ ದಿನಾಂಕ 23 ಸೆಪ್ಟೆಂಬರ್ 2025ರಿಂದ 02 ಅಕ್ಟೋಬರ್ 2025ರವರೆಗೆ ಆಯೋಜಿತ ಮಡಿಕೇರಿ ದಸರಾ ಜನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರು, ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ.
ಮಡಿಕೇರಿಯ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ದಸರಾ ಸಾಂಸ್ಕೃತಿಕ ಸಮಿತಿಯಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಈ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಕಲಾವಿದರು, ಕಲಾತಂಡಗಳು ತಾವು ಪ್ರದರ್ಶಿಸುವ ಕಲಾ ಪ್ರಕಾರ, ಪಾಲ್ಗೊಳ್ಳುವ ಕಲಾವಿದರ ಸಂಖ್ಯೆ, ಅಪೇಕ್ಷಿತ ದಿನಾಂಕ, ಮೊಬೈಲ್ ಸಂಖ್ಯೆಯೊಂದಿಗಿನ ವಿಳಾಸವನ್ನು ದಿನಾಂಕ 25 ಆಗಸ್ಟ್ 2025ರೊಳಗಾಗಿ ಅಧ್ಯಕ್ಷರು, ಮಡಿಕೇರಿ ನಗರ ದಸರಾ ಸಾಂಸ್ಕೃತಿಕ ಸಮಿತಿ, ಮಡಿಕೇರಿ ನಗರ ದಸರಾ ಸಮಿತಿ ಕಛೇರಿ, ನಗರಸಭಾ ಸಂಕೀರ್ಣ, ಮುಖ್ಯರಸ್ತೆ, ಮಡಿಕೇರಿ – 571201 ಈ ವಿಳಾಸಕ್ಕೆ ತಲುಪಿಸಬೇಕು. ಅಥವಾ [email protected] ಇಮೇಲ್ ಮೂಲಕ ಕಳುಹಿಸಬಹುದು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಬಳಿಕ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಕಲಾಪ್ರದರ್ಶನದ ಆಯ್ಕೆಯಲ್ಲಿ ದಸರಾ ಸಾಂಸ್ಕೃತಿಕ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಒಂದು ಕಲಾತಂಡಕ್ಕೆ, ಕಲಾವಿದರಿಗೆ ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ 11 ದಿನಗಳ ಪೈಕಿ ಒಂದು ಬಾರಿ ಮಾತ್ರ ಪ್ರದರ್ಶನ ನೀಡಲು ಅವಕಾಶ ಇದೆ ಎಂದು ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ.99725 38584, 87621 10948 ಸಂಪರ್ಕಿಸಬಹುದು.