ಬೆಂಗಳೂರು : ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ದಿನಾಂಕ 07 ಮತ್ತು 08 ಫೆಬ್ರುವರಿ 2026ರಂದು ವಿದ್ಯಾರ್ಥಿ ಜಾನಪದ ಲೋಕೋತ್ಸವ ಆಯೋಜಿಸಲಾಗಿದೆ. ರಾಜ್ಯದ ಶಾಲಾ-ಕಾಲೇಜುಗಳ 8ನೇ ತರಗತಿಯಿಂದ ಕಾಲೇಜು ವಿದ್ಯಾರ್ಥಿಗಳು ಜನಪದ ಕಲೆ, ನೃತ್ಯ ರೂಪಕದ ವಿದ್ಯಾರ್ಥಿ ತಂಡಗಳು ಶಾಲಾ-ಕಾಲೇಜು ಮುಖ್ಯಸ್ಥರ ಅನುಮತಿ ಪಡೆದು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಸೂಕ್ತ ಸಂಭಾವನೆ, ಪ್ರಮಾಣ ಪತ್ರ ದೊರೆಯಲಿದೆ. ಕಲಾ ಪ್ರದರ್ಶನದ ಯೂಟ್ಯೂಬ್- ಲಿಂಕ್ ಮತ್ತು ಭಾಗವಹಿಸುವ ಕುರಿತು ಮನವಿಯನ್ನು ಪರಿಷತ್ತಿನ ಇ-ಮೇಲ್ ವಿಳಾಸ [email protected] ಗೆ ದಿನಾಂಕ 10 ಜನವರಿ 2026ರೊಳಗೆ ಕಳುಹಿಸಬೇಕು ಎಂದು ಪರಿಷತ್ತು ಅಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ ತಿಳಿಸಿದ್ದಾರೆ.
