ಮಂಗಳೂರು : ತುಳುಕೂಟದ ಕುಡ್ಲ ಸಂಘಟನೆ ನೀಡುವ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿಗೆ ಅಪ್ರಕಟಿತ ಸ್ವತಂತ್ರ ನಾಟಕ ಕೃತಿಗಳನ್ನು ಆಹ್ವಾನಿಸಲಾಗಿದೆ.
ಕೃತಿ ಈವರೆಗೆ ಎಲ್ಲಿಯೂ ಪ್ರದರ್ಶನ ಕಂಡಿರಬಾರದು. ಸ್ವತಂತ್ರ ಕೃತಿ ಎಂದು ದೃಢೀಕರಿಸಬೇಕು. ಮೂರು ಬಾರಿ ಪ್ರಶಸ್ತಿ ಗೆದ್ದವರ ಕೃತಿ ಅಮಾನ್ಯವಾಗುತ್ತದೆ. ಕೃತಿ ತುಳುಭಾಷೆಯಲ್ಲಿ ಇರಬೇಕು. ಪ್ರಶಸ್ತಿಯ ಬಹುಮಾನಗಳ ಮೊತ್ತ ಕ್ರಮವಾಗಿ ರೂ.10,000/-, ರೂ.8,000/, ರೂ.6,000/- ಆಗಿದೆ. ಡಿ. ವೀರೇಂದ್ರ ಹೆಗ್ಗಡೆಯವರು ಈ ಪ್ರಶಸ್ತಿಯನ್ನು ಪ್ರಾಯೋಜಿಸುತ್ತಿದ್ದಾರೆ. ನಾಟಕದ ಪ್ರತಿಯನ್ನು ತುಳುಕೂಟದ ಅಧ್ಯಕ್ಷೆ ಹೇಮಾ ದಾಮೋದರ, ನಿಸರ್ಗ ಮನೆ, ನಿಸರ್ಗ ಕ್ರಾಸ್, ಮರೋಳಿ, ಮಂಗಳೂರು ಈ ವಿಳಾಸಕ್ಕೆ ದಿನಾಂಕ 30 ಜನವರಿ 2025ರ ಒಳಗೆ ಕಳುಹಿಸಬೇಕು ಎಂದು ತುಳುಕೂಟದ ಪ್ರದಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ (9481163531) ತಿಳಿಸಿದ್ದಾರೆ.
