ಬೆಂಗಳೂರು : ಸಮಾಜಮುಖಿ ಪ್ರಕಾಶನವು 2025ನೇ ಸಾಲಿನ ‘ಸಮಾಜಮುಖಿ ವಾರ್ಷಿಕ ಕಥಾ ಸ್ಪರ್ಧೆ’ಗೆ ಕಥೆಗಳನ್ನು ಆಹ್ವಾನಿಸಿದೆ. ಬಹುಮಾನಕ್ಕೆ ಆಯ್ಕೆಯಾಗುವ ಐದು ಕಥೆಗಳ ಲೇಖಕರಿಗೆ ತಲಾ ರೂ. ಐದು ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಲಾಗುತ್ತದೆ. ಮೆಚ್ಚುಗೆ ಪಡೆದ ಹತ್ತು ಕಥೆಗಳಿಗೆ ಸಮಾಜಮುಖಿ ವಾರ್ಷಿಕ ಕಥಾ ಸಂಕಲನದಲ್ಲಿ ಅವಕಾಶ ಒದಗಿಸಲಾಗುತ್ತದೆ. ಅಪ್ರಕಟಿತ ಕಥೆಗಳಿಗೆ ಎರಡು ಸಾವಿರ ಪದಗಳ ಮಿತಿಯಿದ್ದು, ನುಡಿ ಅಥವಾ ಯೂನಿಕೋಡ್ ಲಿಪಿಯಲ್ಲಿರಬೇಕು. ಕಥೆಗಳನ್ನು ದಿನಾಂಕ 31 ಡಿಸೆಂಬರ್ 2025ರೊಳಗೆ [email protected]ಗೆ ಕಳುಹಿಸಬೇಕು ಎಂದು ಪ್ರಕಾಶನದ ಚಂದ್ರಕಾಂತ ವಡ್ಡು ತಿಳಿಸಿದ್ದಾರೆ.
