ಕೋಟ : ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಅಮೃತೇಶ್ವರಿ ಮಹಿಳಾ ಮೀನುಗಾರರ ಸಹಕಾರಿ ಸಂಘ ಕೋಟ, ಉಸಿರು ಮತ್ತು ನೆನಪು ಕೋಟ ಇವರ ಸಾರಥ್ಯದಲ್ಲಿ ಕಾಲಮಿತಿ ಸಾಹಿತ್ಯ ಸಮ್ಮೇಳನದ ಮೂರನೆಯ ಸಂಚಿಕೆಯಾಗಿ ಮಹಿಳೆಯರ ಸಾಹಿತ್ಯ ಸಮ್ಮೇಳನವು ದಿನಾಂಕ 15 ಮಾರ್ಚ್ 2026ರಂದು ನಡೆಯಲಿದೆ.
ಈ ಸಮ್ಮೇಳನದಲ್ಲಿ ಮಹಿಳೆಯರ ಕವಿಗೋಷ್ಠಿ ನಡೆಯಲಿದ್ದು, ಕವಿಗೋಷ್ಠಿಯಲ್ಲಿ ಭಾಗವಹಿಸುವವರು ದಿನಾಂಕ 25 ಫೆಬ್ರವರಿ 2026ರ ಒಳಗೆ ತಮ್ಮ ಹೆಸರನ್ನು ಕೆ. ವಾಣಿಶ್ರೀ ಅಶೋಕ್ ಐತಾಳ 9535705355 ಇವರಿಗೆ ಕಳುಹಿಸಬೇಕಾಗಿ ಪ್ರತಿಷ್ಠಾನದ ಗೌರವ ಅಧ್ಯಕ್ಷ ಆನಂದ ಸಿ. ಕುಂದರ್, ಅಧ್ಯಕ್ಷ ಸತೀಶ್ ಬಾರಿಕೆರೆ, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಹಾಗೂ ಕಾರ್ಯಕ್ರಮದ ನಿರ್ದೇಶಕರಾದ ಸುಶೀಲಾ ಸೋಮಶೇಖರ್, ಪಂಚಾಯತ್ ಪಿಡಿಒ ರವೀಂದ್ರ ರಾವ್, ಕಾಯದರ್ಶಿ ಸುಮತಿ ಅಂಚನ್ ತಿಳಿಸಿದ್ದಾರೆ.
