ಮಂಗಳೂರು : ಅರೆಹೊಳೆ ಪ್ರತಿಷ್ಠಾನವು ‘ನಾನು ಬರೆದ ಕಥೆ’ ಎಂಬ ಕನ್ನಡ ಸಣ್ಣ ಕಥಾ ಸ್ಪರ್ಧೆಯನ್ನು ಆಯೋಜಿಸಿದ್ದು, ಕಥೆಗಾರರಿಂದ ಸ್ವರಚಿತ ಅಪ್ರಕಟಿತ ಕಥೆಗಳನ್ನು ಆಹ್ವಾನಿಸಿದೆ. 2000 ಶಬ್ದ ಮಿತಿಯ ಕಥೆಗಳಾಗಿರಬೇಕು. ಆಯ್ಕೆಯಾದ ಕಥೆಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳಿದ್ದು ಅನುಕ್ರಮವಾಗಿ ರೂ.7000/-, ರೂ.5000/- ಮತ್ತು ರೂ.3,000/- ನಗದು, ಪ್ರಶಸ್ತಿ ಪತ್ರ ನೀಡಲಾಗುವುದು. ತೀರ್ಪುಗಾರರ ಮೆಚ್ಚುಗೆ ಪಡೆದ ಐದು ಕಥೆಗಳಿಗೆ ತಲಾ ರೂ.1000/- ಬಹುಮಾನವಿರುತ್ತದೆ. ಕಥೆ ಕಳಿಸಲು ಕೊನೆಯ ದಿನ ಜನವರಿ 30 ಎಂದು ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ತಿಳಿಸಿದ್ದಾರೆ.

