ಶ್ರೀಮಂಗಲ : ಕೊಡವ ಭಾಷೆಯ ಪ್ರತಿಷ್ಠಿತ ಸಾಹಿತ್ಯ ಸಂಸ್ಥೆಯಾದ ‘ಕೊಡವ ತಕ್ಕ್ ಎಳ್ತ್ ಕಾರಡ ಕೂಟ’ವು ತನ್ನ ಮಾಸಿಕ ಕಾರ್ಯಕ್ರಮ ಯೋಜನೆಯಡಿ ವಿಶೇಷವಾದ ಕವಿಗೋಷ್ಠಿ ನಡೆಸುವ ಉದ್ದೇಶದಿಂದ ‘ಕನ್ಯಾರ್ ಕವನ ವಾಚನ ಗೋಷ್ಠಿ’ ನಡೆಸಲು ಉದ್ದೇಶಿಸಿದ್ದು, ಕವಿಗಳಿಂದ ಕವನ ಆಹ್ವಾನಿಸಲಾಗಿದೆ.
ಕವಿಗಳು ಕೊಡವ ಕ್ಯಾಲೆಂಡರಿನ ‘ಕನ್ಯಾರ್’ ತಿಂಗಳಿಗೆ (ಸೆ.16 ರಿಂದ ಅ.16 ರವರೆಗಿನ ಅವಧಿಯ) ಸಂಬಂಧಿಸಿದ ವಸ್ತು ವಿಷಯವನ್ನಾಧರಿಸಿ ಕವನ ಬರೆದು ವಾಚಿಸುವ ವಿನೂತನ ಗೋಷ್ಠಿಯನ್ನು ನಡೆಸುತ್ತಿದ್ದು, ಕವಿಗಳು ಕನ್ಯಾರ್ ತಿಂಗಳಿನ ವಿಶೇಷತೆಯನ್ನಾಧರಿಸಿ ಬರೆದ ಕೊಡವ ಕವನವನ್ನು ದಿನಾಂಕ 10 ಅಕ್ಟೋಬರ್ 2025ರ ಒಳಗೆ ಕೊಡವ ತಕ್ಕ್ ಎಳ್ತ್ ಕಾರಡ ಕೂಟದ ಕಛೇರಿಗೆ ತಲುಪಿಸಬಹುದು. ಅಥವಾ 9880584732 / 9448326014 / 9449998789 ಸಂಖ್ಯೆಗಳಿಗೆ ವಾಟ್ಸಾಪ್ ಮೂಲಕ ಕಳುಹಿಸಬಹುದು. ಮೊದಲು ಬಂದ 40 ಕವನಗಳನ್ನು ಗೋಷ್ಠಿಯಲ್ಲಿ ವಾಚಿಸಲು ಅವಕಾಶ ನೀಡುವುದರೊಂದಿಗೆ ಕವನಗಳನ್ನು ಪುಸ್ತಕ ಮುದ್ರಿಸಿ ಪ್ರಕಟಿಸಲಾಗುವುದು. ರಾಜ್ಯಮಟ್ಟದ ಈ ಕನ್ಯಾರ್ ಕವಿಗೋಷ್ಠಿಗೆ ಜಾತಿ, ಧರ್ಮದ ನಿರ್ಬಂಧವಿಲ್ಲದೆ ಕೊಡವ ಭಾಷೆಯಲ್ಲಿ ‘ಕನ್ಯಾರ್’ ತಿಂಗಳ ವಸ್ತು ವಿಷಯಗಳನ್ನಾಧರಿಸಿ ಬರೆದ ಕವನಗಳನ್ನು ಆಯ್ಕೆ ಮಾಡಲಾಗುವುದೆಂದು ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ತಿಳಿಸಿದ್ದಾರೆ.