ಮಂಗಳೂರು : ಕರಾವಳಿ ಲೇಖಕಿಯರ – ವಾಚಕಿಯರ ಸಂಘ (ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆ )ವು ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಲೇಖಕಿಯರಿಗಾಗಿ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದೆ.
ಸಣ್ಣ ಕಥೆಗಳ ಸಂಕಲನ – 2025 : ಜನವರಿಯಿಂದ ಡಿಸೆಂಬರ್ ತಿಂಗಳ ಕೊನೆಯೊಳಗೆ ಪ್ರಕಟಿತ ಸಣ್ಣ ಕಥಾಸಂಕಲನಕ್ಕೆ ಬಹುಮಾನ. ಪ್ರಾಯೋಜಕರು : ಯಶೋದಾ ಜೆನ್ನಿ ಸ್ಮೃತಿ ಸಂಚಯ ಹಿರಿಯಡ್ಕ ಹಾಗೂ ಏಕಾಂಕ ನಾಟಕ ರಚನೆ ಹಸ್ತಪ್ರತಿ ಸ್ಪರ್ಧೆ.
ಏಕಾಂಕ ನಾಟಕ ರಚನಾ ಹಸ್ತಪ್ರತಿ ಸ್ಪರ್ಧೆ : ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಲೇಖಕಿಯರಿಂದ ರಚಿತ ಸುಮಾರು ಒಂದು ಗಂಟೆ ಅವಧಿಯಲ್ಲಿ ಅಭಿನಯಿಸಬಹುದಾದ ಚಾರಿತ್ರಿಕ, ಸಾಮಾಜಿಕ ಅಥವಾ ಪೌರಾಣಿಕ ನಾಟಕದ ಹಸ್ತಪ್ರತಿ. ಅತ್ಯುತ್ತಮ ನಾಟಕ ಕೃತಿಗೆ ಬಹುಮಾನ ಪ್ರಾಯೋಜಕರು : ಸಂದೀಪ ಸಾಹಿತ್ಯ ಪ್ರಕಾಶನ, ಆತ್ರಾಡಿ, ಉಡುಪಿ -567107.
ಸ್ಪರ್ಧಿಗಳು ತಮ್ಮ ಕಥೆಗಳ ತಲಾ ಮೂರು ಪ್ರತಿಗಳನ್ನು ದಿನಾಂಕ 15 ಜನವರಿ 2026ರ ಮೊದಲು ತಲುಪುವಂತೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು. ಮಾರ್ಚ್ ತಿಂಗಳಲ್ಲಿ ಫಲಿತಾಂಶ ಮತ್ತು ಬಹುಮಾನ ವಿತರಣೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9480655427, 9141716602, 9742538833. ವಿಳಾಸ : ಕರಾವಳಿ ಲೇಖಕಿಯರ – ವಾಚಕಿಯರ ಸಂಘ (ರಿ.), ‘ಸಾಹಿತ್ಯ ಸದನ’, ಉರ್ವಸ್ಟೋರ್ ಅಂಚೆ ಕಚೇರಿ ಬಳಿ, ಅಶೋಕನಗರ ಪೋಸ್ಟ್, ಮಂಗಳೂರು -575006.
