ಧಾರವಾಡ : ಕನ್ನಡದ ಮಹತ್ವದ ಲೇಖಕರಲ್ಲೊಬ್ಬರಾದ ದಿ. ಬಿ.ಸಿ. ರಾಮಚಂದ್ರ ಶರ್ಮ [1925-2005] ಅವರ ಜನ್ಮಶತಮಾನೋತ್ಸವದ ನಿಮಿತ್ತ ಸಾಹಿತ್ಯ ಗಂಗಾ ಸಂಸ್ಥೆಯು ಬಿ.ಸಿ. ರಾಮಚಂದ್ರ ಶರ್ಮ ಜನ್ಮಶತಮಾನೋತ್ಸವ ಕಾವ್ಯ ಪ್ರಶಸ್ತಿ 2025 ನೀಡುತ್ತಿದೆ. ಈ ಪ್ರಶಸ್ತಿಯು ಒಂದು ಸಾಂಕೇತಿಕ ಮೊತ್ತ. ಪ್ರಶಸ್ತಿ ಫಲಕ ಮತ್ತು ಸನ್ಮಾನ ಒಳಗೊಂಡಿದೆ. ಹಿಂದೆ ದಿ. ಸು.ರಂ. ಎಕ್ಕುಂಡಿ ಅವರ ಜನ್ಮಶತಮಾನೋತ್ಸವ ಸಂದರ್ಭದಲ್ಲೂ ಸಹ ನಮ್ಮ ಸಂಸ್ಥೆ ಸು. ರಂ. ಎಕ್ಕುಂಡಿ ಜನ್ಮಶತಮಾನೋತ್ಸವ ಕಾವ್ಯ ಪ್ರಶಸ್ತಿ 2023 ನೀಡಿತ್ತು. ಆಸಕ್ತ ಕವಿಗಳು/ಕವಯತ್ರಿಯರು ನಿಯಮಾನುಸಾರವಾಗಿ ಹಸ್ತಪ್ರತಿ ಕಳಿಸಬಹುದು.
ನಿಯಮಗಳು :
1. ಸ್ಪರ್ಧಿಗಳಿಗೆ ಮುಕ್ತ ಪ್ರವೇಶವಿದ್ದು, ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.
2. ಒಬ್ಬ ಸ್ಪರ್ಧಿ ಒಂದು ಹಸ್ತಪ್ರತಿ ಮಾತ್ರ ಕಳಿಸಬೇಕು.
3. ಕನಿಷ್ಠ 30 ಮತ್ತು ಗರಿಷ್ಠ 50 ಸಂಖ್ಯೆಯ ಮಿತಿಯೊಳಗೆ ಸ್ವತಂತ್ರ ಮತ್ತು ಅಪ್ರಕಟಿತ ಕವಿತೆಗಳುಳ್ಳ ಹಸ್ತಪ್ರತಿ ಮಾತ್ರ ಕಳಿಸಬೇಕು.
4. ಅನುವಾದ, ಅನುಸೃಷ್ಟಿ, ರೂಪಾಂತರ, ಸ್ಪೂರ್ತಿ ಅಥವಾ ಪ್ರೇರಣೆ ಪಡೆದ ಕವಿತೆಗಳಿರುವ ಹಸ್ತಪ್ರತಿ ಪರಿಗಣಿಸಲಾಗುವುದಿಲ್ಲ.
5. ಕೈಬರಹದಲ್ಲಿರುವ ಹಸ್ತಪ್ರತಿ ಸ್ವೀಕರಿಸಲಾಗುವುದಿಲ್ಲ. ಕವನಗಳನ್ನು ತಪ್ಪಿಲ್ಲದಂತೆ ಟೈಪಿಸಿ, ಪ್ರಿಂಟೌಂಟ್ ತೆಗೆದು, ಬೈಂಡ್ ಮಾಡಿ ಕಳಿಸಬೇಕು.
6. ಪರಿಚಯ ಪತ್ರ ಮತ್ತು ಒಂದು ಭಾವಚಿತ್ರವನ್ನು ಪ್ರತ್ಯೇಕವಾಗಿ ಹಸ್ತಪ್ರತಿಯ ಜೊತೆ ಲಗತ್ತಿಸಿ ಕಳಿಸಬೇಕು.
7. ಫಲಿತಾಂಶವನ್ನು ದಿನಾಂಕ 02 ಅಕ್ಟೋಬರ್ 2025ರಂದು ಪ್ರಕಟಿಸಲಾಗುವುದು.
ಹಸ್ತಪ್ರತಿ ಕಳಿಸಲು 31 ಆಗಸ್ಟ್ 2025 ಕೊನೆಯ ದಿನಾಂಕವಾಗಿದ್ದು, ಹಸ್ತಪ್ರತಿ ಕಳಿಸಬೇಕಾದ ವಿಳಾಸ : ವಿಕಾಸ ಹೊಸಮನಿ, 2ನೇ ಕ್ರಾಸ್, 2ನೇ ಮೇನ್, ದಾನೇಶ್ವರಿ ನಗರ, ಹಾವೇರಿ 581110 (ಹಾವೇರಿ ಜಿಲ್ಲೆ) ಮೊಬೈಲ್ ನಂಬ್ರ : 9110687473