ಬೆಂಗಳೂರು : ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನವು ರಾಜ್ಯಮಟ್ಟದ ಅತ್ಯುತ್ತಮ ಕಾದಂಬರಿ ಪ್ರಶಸ್ತಿಗಾಗಿ ಲೇಖಕರು ಮತ್ತು ಪ್ರಕಾಶಕರಿಂದ ಕೃತಿಗಳನ್ನು ಆಹ್ವಾನಿಸಿದೆ.
ಪ್ರಶಸ್ತಿಯು ರೂ.25,000/- ನಗದು ಬಹುಮಾನ, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಕಾದಂಬರಿಗಳು 2025ರಲ್ಲಿ ಪ್ರಕಟವಾಗಿರಬೇಕು. ಕಾದಂಬರಿಯ ಮೂರು ಪ್ರತಿಗಳನ್ನು ದಿನಾಂಕ 30 ಜನವರಿ 2026ರ ಒಳಗೆ ಈ ಕೆಳಗೆ ನೀಡಿರುವ ವಿಳಾಸಕ್ಕೆ ಕಳುಹಿಸಬೇಕು ಎಂದು ಪ್ರತಿಷ್ಠಾನದ ಅಧ್ಯಕ್ಷ ಬಿ.ಎಂ. ಹನೀಫ್ ತಿಳಿಸಿದ್ದಾರೆ. ವಿಳಾಸ : ಅಧ್ಯಕ್ಷರು, ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನ, ನಂ.118, ‘ಹೊಂಬೆಳಕು’, 5ನೇ ಕ್ರಾಸ್, ಒಂದನೇ ಬ್ಲಾಕ್, ಎಚ್.ಎಂ.ಟಿ. ಲೇಔಟ್, ನಾಗಸಂದ್ರ ಅಂಚೆ, ಬೆಂಗಳೂರು – 560073, ಮಾಹಿತಿಗೆ : 96860 73837, 77603 50244.
