ಹೊಸದುರ್ಗ : ಕನ್ನಡ ಸಾಹಿತ್ಯ ಪರಿಷತ್ ಹೊಸದುರ್ಗ ತಾಲೂಕು ಇದರ ವತಿಯಿಂದ ಸೆಪ್ಟಂಬರ್ ಎರಡನೇ ವಾರದಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಕವಿಗೋಷ್ಠಿಗೆ ಚಿತ್ರದುರ್ಗ ಜಿಲ್ಲೆಯ ಕವಿಗಳಿಂದ ಕವನಗಳನ್ನು ಆಹ್ವಾನಿಸಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಎಂ.ಆರ್. ಶಾಂತಪ್ಪ ಮತ್ತು ಕಾರ್ಯದರ್ಶಿಗಳು ತಿಳಿಸಿದ್ದಾರೆ.
ದಿನಾಂಕ 14 ಸೆಪ್ಟೆಂಬರ್ 2025ರಂದು ಭಾನುವಾರ ಬೆಳಿಗ್ಗೆ 11-30 ಗಂಟೆಗೆ ಜಿಲ್ಲಾಮಟ್ಟದ ಕವಿಗೋಷ್ಠಿಯನ್ನು ನಡೆಸಲು ಉದ್ದೇಶಿಸಿದ್ದು, ಭಾಗವಹಿಸುವ ಜಿಲ್ಲೆಯ ಕವಿಗಳು ಸೆಪ್ಟೆಂಬರ್ 05ರೊಳಗೆ ತಾವು ವಾಚನ ಮಾಡಲಿರುವ ಒಂದು ಕವಿತೆ ಹಾಗೂ ಭಾವಚಿತ್ರದೊಂದಿಗೆ ಅಧ್ಯಕ್ಷರು ಮತ್ತು ಕಾರ್ಯದರ್ಶಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಟಿ.ಬಿ. ಸರ್ಕಲ್, ಪ್ರಮುಖ ರಸ್ತೆ, ಹೊಸದುರ್ಗ 577527 ಚಿತ್ರದುರ್ಗ ಜಿಲ್ಲೆ ಇಲ್ಲಿಗೆ ಅಂಚೆ ಮತ್ತು ಕೊರಿಯರ್ ಮೂಲಕ ಕಳುಹಿಸಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುವಂತೆ ಕೋರಲಾಗಿದ್ದು, ಹೆಚ್ಚಿನ ಮಾಹಿತಿಗೆ ಕಾರ್ಯದರ್ಶಿಗಳಾದ ಡಾ. ಚಂದ್ರು ಕಲಾವಿದ ಮೊಬೈಲ್ ನಂಬರ್ 9902851319 ಮತ್ತು ಎಂ.ಎಸ್. ರಮೇಶ್ ಮತ್ತೋಡು 7353933539 ಉಪಾಧ್ಯಕ್ಷರಾದ ನಾಗತಿಹಳ್ಳಿ ಮಂಜುನಾಥ್ ಮೊಬೈಲ್ ನಂಬರ್ 9986994558 ಸಂಖ್ಯೆಯನ್ನು ಸಂಪರ್ಕಿಸಬಹುದು.