ಸುಳ್ಯ : ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸ್ವಾಗತ ಸಮಿತಿ 28ನೇ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ -2025 ಇದರ ಆಶ್ರಯದಲ್ಲಿ ದಿನಾಂಕ 30 ಡಿಸೆಂಬರ್ 2025ರಂದು ಚೊಕ್ಕಾಡಿ ಪ್ರೌಢ ಶಾಲೆ ಕುಕ್ಕುಜಡ್ಕದಲ್ಲಿ 28ನೇ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಈ ಸಮ್ಮೇಳನ ಸಮಾರಂಭದಲ್ಲಿ ನಡೆಯಲಿರುವ ಕವಿಗೋಷ್ಠಿಯಲ್ಲಿ ಭಾಗವಹಿಸುವ ಆಸಕ್ತರು ತಮ್ಮ ಕವನ ಮತ್ತು ಹೆಸರು ಹಾಗೂ ವಿಳಾಸವನ್ನು ಹೆಸರನ್ನು ದಿನಾಂಕ 02 ಡಿಸೆಂಬರ್ 2025ರ ಒಳಗೆ ಅಧ್ಯಕ್ಷರು, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು (9448889005) ಇವರಿಗೆ ಕಳುಹಿಸಲು ತಿಳಿಸಿದೆ. ಸುಳ್ಯ ತಾಲೂಕಿನ ಆಯ್ದ ಕವನಗಳನ್ನು ವಾಚನ ಮಾಡಲು ಅವಕಾಶ ನೀಡಲಾಗುವುದು ಎಂದು ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು ತಿಳಿಸಿದ್ದಾರೆ.
