ಧಾರವಾಡ : ಸಾಹಿತ್ಯ ಗಂಗಾ ಧಾರವಾಡ ಸಂಸ್ಥೆಯು 45 ವರ್ಷದೊಳಗಿನ ಉದಯೋನ್ಮುಖ ಲೇಖಕ/ಲೇಖಕಿಯರನ್ನು ಪ್ರೋತ್ಸಾಹಿಸಲು ಕವಿತೆ, ಕಥೆ, ಪ್ರಬಂಧ ಮತ್ತು ಲೇಖನಗಳ ಸಂಪುಟವೊಂದನ್ನು ಯುವ ಲೇಖಕ/ಲೇಖಕಿಯರಾದ ಡಾ. ಸುಭಾಷ್ ಪಟ್ಟಾಜೆ ಮತ್ತು ಕುಮಾರಿ ಮಧು ಕಾರಗಿಯವರ ಸಂಪಾದಕತ್ವದಲ್ಲಿ ಪ್ರಕಟಿಸಲಿದೆ. ಆಸಕ್ತರು ನಿಯಮಾನುಸಾರವಾಗಿ ಬರಹಗಳನ್ನು ಕಳುಹಿಸಬೇಕು.
ನಿಯಮಗಳು :
# ಈ ಸಂಪುಟಕ್ಕೆ ಸ್ವತಂತ್ರ ಮತ್ತು ಅಪ್ರಕಟಿತ ಕವಿತೆ, ಕಥೆ, ಪ್ರಬಂಧ ಮತ್ತು ಲೇಖನಗಳನ್ನು ಮಾತ್ರ ಕಳುಹಿಸಬೇಕು.
# ಅನುವಾದ, ಅನುಸೃಷ್ಟಿ, ರೂಪಾಂತರ ಮಾಡಿದ ರಚನೆಗಳಿಗೆ ಅವಕಾಶವಿಲ್ಲ.
# ಒಬ್ಬರು ಒಂದು ಕವಿತೆ, ಕಥೆ, ಪ್ರಬಂಧ ಅಥವಾ ಲೇಖನವನ್ನು ಮಾತ್ರ ಕಳುಹಿಸಬೇಕು.
# ಕವಿತೆ, ಕಥೆ, ಪ್ರಬಂಧ ಮತ್ತು ಲೇಖನಗಳನ್ನು ಕಡ್ಡಾಯವಾಗಿ docx & pdf ಎರಡೂ ರೂಪದಲ್ಲಿ ಕಳಿಸಬೇಕು. ಬರಹಗಾರರ ಸಂಕ್ಷಿಪ್ತ ಪರಿಚಯ, ವಯೋಮಿತಿ ದೃಢೀಕರಣದ ದಾಖಲೆ, ಪೂರ್ಣ ವಿಳಾಸ ಮತ್ತು ಒಂದು ಫೋಟೋ ಪ್ರತ್ಯೇಕವಾಗಿ ಕಳಿಸಬೇಕು.
# ಗುಣಮಟ್ಟವೊಂದೇ ಆಯ್ಕೆಯ ಏಕೈಕ ಮಾನದಂಡ, ಕವಿತೆ, ಕಥೆ, ಪ್ರಬಂಧ ಮತ್ತು ಲೇಖನಗಳ ಆಯ್ಕೆಯಲ್ಲಿ ಸಂಪಾದಕರ ತೀರ್ಮಾನವೇ ಅಂತಿಮ.
# ಕವಿತೆ, ಕಥೆ, ಪ್ರಬಂಧ ಮತ್ತು ಲೇಖನಗಳನ್ನು ಕಳಿಸಲು ಕೊನೆಯ ದಿನಾಂಕ 10 ಜೂನ್ 2025.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಡಾ. ಸುಭಾಷ್ ಪಟ್ಟಾಜೆ – 9645081966 ಮತ್ತು ಕುಮಾರಿ ಮಧು ಕಾರಗಿ – 8431997517