ಬಳ್ಳಾರಿ : ಬಳ್ಳಾರಿಯ ‘ಸಂಗಂ ಟ್ರಸ್ಟ್’ ನೀಡುವ ‘ಸಂಗಂ ಸಾಹಿತ್ಯ ಪುರಸ್ಕಾರ’ಕ್ಕೆ ಕಾವ್ಯ ಸಂಕಲನಗಳನ್ನು ಆಹ್ವಾನಿಸಿದೆ. 2023-25ರ ಅವಧಿಯಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಕವನ ಸಂಕಲನವನ್ನು ಬರಹಗಾರರು, ಪ್ರಕಾಶಕರು ಸ್ಪರ್ಧೆಗೆ ಕಳುಹಿಸಬಹುದು. ಪ್ರಶಸ್ತಿಯು ರೂ.25,000/- ನಗದು, ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ಸಂಗಂ ಸಂಸ್ಥೆಯ ಅಧ್ಯಕ್ಷರಾದ ಡಾ. ವೈ.ಸಿ. ಯೋಗಾನಂದ ರೆಡ್ಡಿ ತಿಳಿಸಿದ್ದಾರೆ. ವಿಳಾಸ : ಕೆ. ಶಿವಲಿಂಗಪ್ಪ ಹಂದಿಹಾಳು, ಮನೆ ಸಂಖ್ಯೆ : 44/C, ಚೇತನಾ ಕ್ಲಿನಿಕ್ ಪಕ್ಕ, ಜಿಮ್ ಖಾನಾ ರಸ್ತೆ, ಪಾರ್ವತಿ ನಗರ, ಬಳ್ಳಾರಿ -583103. ದೂರವಾಣಿ ಸಂಖ್ಯೆ: 9980346474.
