ಬೆಳಗಾವಿ : ಸಹೃದಯ ಸಾಹಿತ್ಯ ಪ್ರತಿಷ್ಠಾನವು ಅತ್ಯುತ್ತಮ ಕವನ ಹಾಗೂ ಗಜಲ್ ಸಂಕಲನಗಳಿಗೆ ರಾಜ್ಯಮಟ್ಟದ ‘ಸಹೃದಯ ಕಾವ್ಯ ಪ್ರಶಸ್ತಿ’ ನೀಡಲು ನಿರ್ಧರಿಸಿದ್ದು, ಲೇಖಕರಿಂದ ಕವನ ಸಂಕಲನ ಆಹ್ವಾನಿಸಿದೆ.
ಪ್ರಶಸ್ತಿಯು ರೂ. ಐದು ಸಾವಿರ ನಗದು ಬಹುಮಾನ ಒಳಗೊಂಡಿದ್ದು, 2025ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡಿರುವ ಕವನ ಹಾಗೂ ಗಜಲ್ ಸಂಕಲನಗಳ ಮೂರು ಪ್ರತಿಗಳನ್ನು ದಿನಾಂಕ 10 ಮಾರ್ಚ್ 2026ರೊಳಗಾಗಿ ಕಳುಹಿಸಲು ಕೋರಲಾಗಿದೆ. ಕೃತಿಗಳನ್ನು ನಾಗೇಶ ಜೆ. ನಾಯಕ ಅಧ್ಯಕ್ಷರು, ಸಹೃದಯ ಸಾಹಿತ್ಯ ಪ್ರತಿಷ್ಠಾನ (ರಿ.), ಅವ್ವ ಶಿವಬಸವ ನಗರ, ರಾಮಾಪುರ ಸೈಟ್, ಸವದತ್ತಿ-591126 ಬೆಳಗಾವಿ ಈ ವಿಳಾಸಕ್ಕೆ ಕಳುಹಿಸಬಹುದು ಎಂದು ತಿಳಿಸಿದೆ.
