ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ 2024ನೇ ಸಾಲಿನ ವಿವಿಧ ಪುಸ್ತಕ ಬಹುಮಾನಕ್ಕೆ ಲೇಖಕಿಯರಿಂದ ಕೃತಿಗಳನ್ನು ಆಹ್ವಾನಿಸಲಾಗಿದೆ.
ಕಾದಂಬರಿ, ವಿಜ್ಞಾನ ಸಾಹಿತ್ಯ, ಲಲಿತ ಪ್ರಬಂಧ, ಭಾರತದ ಯಾವುದೇ ಭಾಷೆಯ ಅನುವಾದಿತ ಕಾದಂಬರಿ/ಕಥಾ ಸಂಕಲನ/ ಜೀವನ ಚರಿತ್ರೆ, 50 ವರ್ಷದ ಒಳಗಿನವರಿಗಾಗಿ ಕಾವ್ಯಕ್ಕಾಗಿ ಪ್ರಶಸ್ತಿ, ವಚನ ಸಾಹಿತ್ಯದಲ್ಲಿ ಪ್ರಕಟವಾದ ಯಾವುದೇ ಪ್ರಕಾರದ ಕೃತಿ, ಸಣ್ಣಕಥೆ, ಪ್ರವಾಸ ಸಾಹಿತ್ಯ, ಹಾಸ್ಯ ಕೃತಿ, ಮಕ್ಕಳ ಸಾಹಿತ್ಯ, ನಾಟಕ, ಸಂಶೋಧನೆ, ಆತ್ಮಕಥನ, 2024ರಲ್ಲಿ ಡಿಜಿಟಲ್ ಮತ್ತು ಮುದ್ರಣ ಮಾಧ್ಯಮದಲ್ಲಿ ಪ್ರಕಟಗೊಂಡ ಕಥೆಗಳ ಕೃತಿಗಳನ್ನು ದಿನ್ನಕ 20 ಆಗಸ್ಟ್ 2025ರ ಒಳಗೆ ಕರ್ನಾಟಕ ಲೇಖಕಿಯರ ಸಂಘ (ರಿ.) ಬೆಂಗಳೂರು, ನಂ.206, 2ನೇ ಮಹಡಿ, ವಿಜಯ ಮ್ಯಾನ್ ಶನ್, 2ನೇ ಕ್ರಾಸ್, 2ನೇ ಮುಖ್ಯ ರಸ್ತೆ, ಚಾಮರಾಜಪೇಟೆ, ಬೆಂಗಳೂರು-560018 ಇಲ್ಲಿಗೆ ಕಳುಹಿಸಿಕೊಡಬೇಕು.