ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘದ 2025ನೆಯ ಸಾಲಿನ ವಿವಿಧ ಪುಸ್ತಕ ಬಹುಮಾನಗಳಿಗೆ ಲೇಖಕಿಯರಿಂದ ಕಾದಂಬರಿ, ಕಥಾಸಂಕಲನ, ವಿಜ್ಞಾನ ಕೃತಿಗಳು, ಲಲಿತ ಪ್ರಬಂಧ, ಅನುವಾದ ಕೃತಿ, ಕವನ ಸಂಕಲನ, ಪ್ರವಾಸ ಸಾಹಿತ್ಯ, ನಾಟಕ, ಹಾಸ್ಯ ಕೃತಿ, ಮಕ್ಕಳ ಸಾಹಿತ್ಯ, ಆತ್ಮಕಥನ ಮುಂತಾದ ಕೃತಿಗಳನ್ನು ಆಹ್ವಾನಿಸಲಾಗಿದೆ. (2025ರ ಜನವರಿಯಿಂದ 2025ರ ಡಿಸೆಂಬರ್ ವರೆಗೆ ಪ್ರಕಟಗೊಂಡಿರಬೇಕು.) ಕೃತಿಗಳನ್ನು ದಿನಾಂಕ 10 ಫೆಬ್ರುವರಿ 2026ರೊಳಗಾಗಿ ಕರ್ನಾಟಕ ಲೇಖಕಿಯರ ಸಂಘ (ರಿ.) ಬೆಂಗಳೂರು, ನಂ.206, 2ನೇ ಮಹಡಿ, ವಿಜಯ ಮ್ಯಾನ್ ಶನ್, 2ನೇ ಕ್ರಾಸ್, 2ನೇ ಮುಖ್ಯ ರಸ್ತೆ, ಚಾಮರಾಜಪೇಟೆ, ಬೆಂಗಳೂರು – 560018 ಈ ವಿಳಾಸಕ್ಕೆ ಕಳಿಸಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಸಿ, ಸಂಘದ ಕಾರ್ಯದರ್ಶಿ – ಸುಮಾ ಸತೀಶ್ – 9481480220
ಉಪಾಧ್ಯಕ್ಷರು – ಸರ್ವಮಂಗಳಾ- 9448818900
1. ಕಾಕೋಳು ಸರೋಜಮ್ಮ ಪ್ರಶಸ್ತಿ (ಕಾದಂಬರಿ)
2. ಭಾಗ್ಯ ನಂಜಪ್ಪ ಪ್ರಶಸ್ತಿ (ವಿಜ್ಞಾನ ಸಾಹಿತ್ಯ)
3. ನಾಗರತ್ನ ಚಂದ್ರಶೇಖರ್ ಪ್ರಶಸ್ತಿ (ಲಲಿತ ಪ್ರಬಂಧ)
4. ಜಿ.ವಿ. ನಿರ್ಮಲ ಪ್ರಶಸ್ತಿ (ಭಾರತದ ಯಾವುದೇ ಭಾಷೆಯ ಅನುವಾದಿತ ಕಾದಂಬರಿ/ ಕಥಾ ಸಂಕಲನ/ ಜೀವನ ಚರಿತ್ರೆ)
5. ಡಾ. ಬಿ.ಸಿ. ಶೈಲ ನಾಗರಾಜ್ ಕಾವ್ಯ ಪುರಸ್ಕಾರ (ಕಾವ್ಯಕ್ಕಾಗಿ, 50 ವರ್ಷದ ಒಳಗಿನವರಿಗಾಗಿ)
6. ಸಂಕಮ್ಮ ಸಂಕಣ್ಣನವರ್ ಹೆಸರಿನ ಕಾವ್ಯ ಪುರಸ್ಕಾರ (ಕಾವ್ಯಕ್ಕಾಗಿ)
7. ‘ಶ್ರೀ ಜಯ’ ಪ್ರಶಸ್ತಿ (ಲೀಲಾ ಕಲಕೋಟಿ ದತ್ತಿ – ವಚನ ಸಾಹಿತ್ಯದಲ್ಲಿ ಪ್ರಕಟವಾದ ಯಾವುದೇ ಪ್ರಕಾರದ ಕೃತಿಗಳಿಗಾಗಿ)
8. ಸುಶೀಲಾ ಸೋಮಶೇಖರ್ ಪ್ರಶಸ್ತಿ (ವಚನ ಸಾಹಿತ್ಯದಲ್ಲಿ ಪ್ರಕಟವಾದ ಯಾವುದೇ ಪ್ರಕಾರದ ಕೃತಿಗಳಿಗಾಗಿ)
9. ತ್ರಿವೇಣಿ ಸಾಹಿತ್ಯ ಪುರಸ್ಕಾರ (ಪ್ರಾಯೋಜಕರು – ಸುಧಾಮೂರ್ತಿ- ಕಾದಂಬರಿ ಪ್ರಕಾರ)
10. ಕಮಲಾ ರಾಮಸ್ವಾಮಿ (ಪ್ರವಾಸ ಸಾಹಿತ್ಯ)
11. ನುಗ್ಗೆಹಳ್ಳಿ ಪಂಕಜ (ಹಾಸ್ಯ ಕೃತಿ)
12. ಗುಣಸಾಗರಿ ನಾಗರಾಜ್ (ಮಕ್ಕಳ ಸಾಹಿತ್ಯ)
13. ಇಂದಿರಾ ವಾಣಿರಾವ್ (ನಾಟಕ)
14. ಜಯಮ್ಮ ಕರಿಯಣ್ಣ (ಸಂಶೋಧನೆ)
15. ತ್ರಿವೇಣಿ ದತ್ತಿನಿಧಿ (ಕಥಾ ಪ್ರಕಾರಕ್ಕೆ. ಪ್ರಥಮ, ದ್ವಿತೀಯ, ತೃತೀಯ ಬಹುಮಾನ)
16. ಉಷಾ ಪಿ. ರೈ. ಪ್ರಶಸ್ತಿ – (ಕಾವ್ಯ ಪ್ರಕಾರ – 2024- 2025 ಈ ಎರಡು ವರ್ಷಗಳಲ್ಲಿ ಪ್ರಕಟಗೊಂಡ ಕಾವ್ಯ ಕೃತಿಗಳು)
17. ನಿರುಪಮಾ (2025ರಲ್ಲಿ ಡಿಜಿಟಲ್ ಮತ್ತು ಮುದ್ರಣ ಮಾಧ್ಯಮದಲ್ಲಿ ಪ್ರಕಟಗೊಂಡ ಕಥೆಗಳು)
18. ಲಕ್ಷ್ಮೀದೇವಮ್ಮ ಕಥಾ ಪುರಸ್ಕಾರ
19. ಶ್ರೀಲೇಖಾ ದತ್ತಿ ಪ್ರಶಸ್ತಿ (ಯಾವುದೇ ಪ್ರಕಾರದ ಅನುವಾದಿತ ಕೃತಿ)
ಆಯ್ಕೆಯಾದ ಕೃತಿಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದು ಸಂಘದ ಅಧ್ಯಕ್ಷರಾದ ಪ್ರೊ. ಆರ್. ಸುನಂದಮ್ಮನವರು ತಿಳಿಸಿದ್ದಾರೆ.
ನಿಯಮಗಳು
* ಕೃತಿಗಳ ಮೇಲೆ ಆಯಾ ದತ್ತಿನಿಧಿಯ ಹೆಸರು ಬರೆಯಬೇಕು.
* ಲೇಖಕಿಯರು ತಮ್ಮ ಕೃತಿಯ ಮೂರು ಪ್ರತಿಗಳನ್ನು ಕಳುಹಿಸಬೇಕು.
*ಈಗಾಗಲೇ ಎರಡು ಬಾರಿ ಪುಸ್ತಕ ಬಹುಮಾನ ಪಡೆದ ಲೇಖಕಿಯರ ಕೃತಿಗಳನ್ನು ಬಹುಮಾನಕ್ಕಾಗಿ ಪರಿಗಣಿಸಲಾಗುವುದಿಲ್ಲ.
*ಸಂಪಾದಿತ ಕೃತಿಗಳನ್ನು ಹಾಗೂ ಪಿ.ಎಚ್ ಡಿ ಪ್ರಬಂಧಗಳನ್ನು ಬಹುಮಾನಕ್ಕಾಗಿ ಪರಿಗಣಿಸಲಾಗುವುದಿಲ್ಲ.
* ಕೃತಿಯ ಪ್ರಥಮ ಆವೃತ್ತಿಯನ್ನು ಮಾತ್ರ ಪರಿಗಣಿಸಲಾಗುವುದು.
* ಕೃತಿಗಳನ್ನು ದಿನಾಂಕ 10 ಫೆಬ್ರುವರಿ 2026ರ ಒಳಗೆ ನಮಗೆ ತಲುಪುವಂತೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸುವುದು. ತಡವಾಗಿ ಬಂದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ.
* ಕೃತಿಗಳು ತಲುಪಬೇಕಾದ ವಿಳಾಸ : ಕರ್ನಾಟಕ ಲೇಖಕಿಯರ ಸಂಘ (ರಿ.) ಬೆಂಗಳೂರು, ನಂ.206, 2ನೇ ಮಹಡಿ, ವಿಜಯ ಮ್ಯಾನ್ ಶನ್, 2ನೇ ಕ್ರಾಸ್, 2ನೇ ಮುಖ್ಯ ರಸ್ತೆ, ಚಾಮರಾಜಪೇಟೆ, ಬೆಂಗಳೂರು – 560018.
