ಉರ್ವಸ್ಟೋರ್ : ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ವ್ಯಾಪ್ತಿಯ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ ಆಯೋಜಿಸುವ 2025-26ರ ಸಾಲಿನ ದತ್ತಿ ಪ್ರಶಸ್ತಿ ಮತ್ತು ಸಾಹಿತ್ಯ ಬಹುಮಾನಕ್ಕೆ ಲೇಖತಿಯರಿಂದ ಕೃತಿಗಳನ್ನು ಆಹ್ವಾನಿಸಲಾಗಿದೆ.
ಸಂಘದ ಸದಸ್ಯೆಯಾಗಿದ್ದ ವೈಚಾರಿಕ ಮನೋಧರ್ಮದ ಸಂವೇದನಾಶೀಲ ಲೇಖಕಿ ನಾಡೋಜ ಡಾ. ಸಾರಾ ಅಬೂಬಕ್ಕರ್ ಇವರ ಹೆಸರಿನಲ್ಲಿ ಪ್ರತಿ ವರ್ಷ ಕೊಡುವ ಸಾಹಿತ್ಯ ಪ್ರಶಸ್ತಿಗೆ ಈ ಬಾರಿ ಲೇಖಕಿಯರಿಂದ ‘ಸಂಶೋಧನಾತ್ಮಕ ಕೃತಿ’ಗಳನ್ನು (ಪಿಎಚ್.ಡಿ. ಪ್ರಬಂಧಗಳನ್ನು ಸ್ವೀಕರಿಸಲಾಗುವುದಿಲ್ಲ) ಆಹ್ವಾನಿಸಲಾಗಿದೆ. 2023, 2024, 2025ರ ಸಾಲಿನಲ್ಲಿ ಪ್ರಕಟವಾದ ಕೃತಿಯ ಮೂರು ಪ್ರತಿಗಳನ್ನು ದಿನಾಂಕ 15 ಡಿಸೆಂಬರ್ 2025ರ ಒಳಗೆ ತಲುಪುವಂತೆ ಸಂಘದ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು. ಪುಸ್ತಕದ ಜತೆಗೆ ವೈಯಕ್ತಿಕ ಮಾಹಿತಿ ಮತ್ತು ಸಂಪರ್ಕ ಸಂಖ್ಯೆಯಿರುವ ಪರಿಚಯ ಪತ್ರವನ್ನು ಪ್ರತ್ಯೇಕ ಲಗತ್ತಿಸಿರಬೇಕು. ವಿಳಾಸ : ಅಧ್ಯಕ್ಷರು, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ, ‘ಸಾಹಿತ್ಯ ಸದನ’, ಅಂಚೆ ಕಚೇರಿ ಬಳಿ, ಉರ್ವಸ್ಟೋರ್ ಮಂಗಳೂರು-575006 ಇಲ್ಲಿಗೆ ಕಳುಹಿಸಬಹುದು.
