ಬೆಂಗಳೂರು : 2026ನೇ ಸಾಲಿನ ಕೆ.ಪಿ. ಪೂರ್ಣಚಂದ್ರ ತೇಜಸ್ವಿ (ಪೂಚಂತೆ) ಇವರ ಹೆಸರಿನಲ್ಲಿ ನೀಡಲಾಗುವ ‘ಪೂಚಂತೆ ಸಾಹಿತ್ಯ ಪುರಸ್ಕಾರ’ಕ್ಕೆ ಲೇಖಕರಿಂದ ಕನ್ನಡದ ಕೃತಿಗಳನ್ನು ಆಹ್ವಾನಿಸಲಾಗಿದೆ.
ಪರಿಗಣನೆಯ ಅವಧಿ : 2025ರಿಂದ 2026ರ ಜನವರಿವರೆಗೆ ಪ್ರಕಟವಾದ ಕೃತಿಗಳು
ಪರಿಗಣನೆಯಲ್ಲಿರುವ ಕೃತಿ ಪ್ರಕಾರಗಳು :
1. ಕವನ ಸಂಕಲನ
2. ಕಾದಂಬರಿ
3. ನಾಟಕ
4. ಲೇಖನ ಸಂಗ್ರಹ
5. ಕಥಾ ಸಂಕಲನ
6. ಮಕ್ಕಳ ಸಾಹಿತ್ಯ
ಪ್ರತಿ ಶೀರ್ಷಿಕೆಯ ಮೂರು ಪ್ರತಿಗಳನ್ನು ಏಪ್ರಿಲ್ ಅಂತ್ಯದೊಳಗೆ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
ಕಳುಹಿಸುವ ವಿಳಾಸ : ಲಿಖಿತ್ ಹೊನ್ನಾಪುರ, ಸುಗ್ಗನಹಳ್ಳಿ ಅಂಚೆ, ತಿಪ್ಪಸಂದ್ರ ಹೋಬಳಿ, ಮಾಗಡಿ ತಾಲೂಕು, ಬೆಂಗಳೂರು ದಕ್ಷಿಣ ಜಿಲ್ಲೆ – 561101. ಸಂಪರ್ಕ ಸಂಖ್ಯೆ : 9353062539
ಲಿಖಿತ್ ಹೊನ್ನಾಪುರ, ಯುವ ಕವಿ, ಸ್ಥಾಪಕರು – ಪೂಚಂತೆ ಸಾಹಿತ್ಯ ಪುರಸ್ಕಾರ
ಉಪಾಧ್ಯಕ್ಷರು – ಯಶೋಮಾರ್ಗ ಸೇವಾ ಫೌಂಡೇಶನ್ (ರಿ.), ಕರ್ನಾಟಕ
2025ನೇ ಸಾಲಿನ ‘ಪೂಚಂತೆ ಸಾಹಿತ್ಯ ಪುರಸ್ಕಾರ’ ಪಡೆದ 5 ಕೃತಿಗಳು
– ನಿಧಿ ಕಥೆಗಳ ಕುಡಿಕೆ – ಕೌಶಿಕ್ ರತ್ನ
– ಆತ್ಮದ ಕನ್ನಡಿ – ಚನ್ನಬಸಯ್ಯ ವಿ. ಪೂಜೇರ
– ಪವಿತ್ರ ಪ್ರೀತಿ ಪ್ರಾಪ್ತಿ – ಉಳುವಂಗಡ ಕಾವೇರಿ ಉದಯ
– ಹಲೋ ಟೀಚರ್ – ಅನಸೂಯ ಯತೀಶ್
– ಭರವಸೆಯ ಹೆಜ್ಜೆಗಳು – ಪ್ರಜ್ವಲ ಶೆಣೈ, ಕಾರ್ಕಳ

