ಹಾಸನ : ಹಾಸನದ ಮಾಣಿಕ್ಯ ಪ್ರಕಾಶನ (ರಿ.) ಸಂಸ್ಥೆಯು 2015ರಿಂದಲೂ ವೈವಿಧ್ಯಮಯ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಸಾಹಿತಿಗಳಿಗೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ ವಿವಿಧ ಲೇಖಕರ 80ಕ್ಕೂ ಹೆಚ್ಚು ಕೃತಿಗಳನ್ನು ಮುದ್ರಣ ಮಾಡಿ ಕನ್ನಡ ಸಾರಸ್ವತ ಲೋಕಕ್ಕೆ ನೀಡುವುದರ ಜೊತೆಗೆ ದಾನಿಗಳ ಸಹಕಾರದಲ್ಲಿ ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ದತ್ತಿ ಪುರಸ್ಕಾರ ನೀಡಿ ಗೌರವಿಸುತ್ತಿದೆ. ಈ ನಿಟ್ಟಿನಲ್ಲಿ 2025ರ ದತ್ತಿ ಪುರಸ್ಕಾರಗಳಿಗೆ 2024ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ವಿವಿಧ ಪ್ರಕಾರದ ಕೃತಿಗಳನ್ನು ಈ ಕೆಳಕಂಡ ದತ್ತಿ ಪ್ರಶಸ್ತಿಗಳಿಗೆ ಆಹ್ವಾನಿಸಲಾಗಿದೆ ಎಂದು ಪ್ರಕಾಶಕಿ ದೀಪಾ ಉಪ್ಪಾರ್ ತಿಳಿಸಿದ್ದಾರೆ.
ಆಸಕ್ತ ಲೇಖಕರು ಸಂಬಂಧಪಟ್ಟ ದತ್ತಿಗಳಿಗೆ ನಿಗದಿತ ಪ್ರಕಾರದ ಮೂರು ಕೃತಿಗಳನ್ನು ಹಾಗೂ ಸ್ವವಿವರಗಳೊಂದಿಗೆ ದಿನಾಂಕ 05 ಜೂನ್ 2025ರೊಳಗೆ ಪ್ರಕಾಶಕರು, ಮಾಣಿಕ್ಯ ಪ್ರಕಾಶನ, #40, ಸಾಹಿತ್ಯ ಸೌಧ, ಮುಖ್ಯರಸ್ತೆ, ಕೆಂಪೇಗೌಡ ಲೇಔಟ್, ಹಾಸನಾಂಬ ನಗರ ಎದುರು, ಸಾಲಗಾಮೆ ರಸ್ತೆ, ಹಾಸನ – 573219, ಮೊ-9739878197 ತಲುಪುವಂತೆ ಕಳುಹಿಸಿಕೊಡಲು ತಿಳಿಸಿದೆ. ಸ್ಪರ್ಧೆಗೆ ಬಂದ ಕೃತಿಗಳನ್ನು ಹಿಂತಿರುಗಿಸಲಾಗುವುದಿಲ್ಲ ಹಾಗೂ ನಿಗದಿತ ದಿನಾಂಕದ ನಂತರ ಬಂದ ಕೃತಿಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
ದಿ. ಸಿ.ಪಿ. ನಾರಾಯಣಚಾರ್ಯ ಸ್ಮಾರಕ ದತ್ತಿ – ಕಾವ್ಯ ಮಾಣಿಕ್ಯ ಪ್ರಶಸ್ತಿ 2025 (ಕಾವ್ಯ ವಿಭಾಗ) :
ಕವಯಿತ್ರಿ ಸಿ.ಎನ್. ನೀಲಾವತಿ ಕೊಡಮಾಡುವ ದಿ. ಸಿ.ಪಿ. ನಾರಾಯಣಚಾರ್ಯ ಸ್ಮಾರಕ ದತ್ತಿ – ಕಾವ್ಯ ಮಾಣಿಕ್ಯ ಪ್ರಶಸ್ತಿ 2025ಕ್ಕೆ 2024ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಅತ್ಯುತ್ತಮ ಎರಡು ಕೃತಿಗಳಿಗೆ ಪ್ರಥಮ 3,000 ರೂ ನಗದು ಮತ್ತು ಪ್ರಶಸ್ತಿ ಫಲಕ ಹಾಗೂ ದ್ವಿತೀಯ ರೂ.2,500/- ನಗದು ಮತ್ತು ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ.
ಎನ್. ಶೈಲಜಾ ಹಾಸನ ದತ್ತಿ – ಪ್ರಬಂಧ ಮಾಣಿಕ್ಯ ಪ್ರಶಸ್ತಿ 2025 (ಲಲಿತ ಪ್ರಬಂಧ ವಿಭಾಗ) :
ಹಿರಿಯ ಸಾಹಿತಿ ಎನ್. ಶೈಲಜಾ ಹಾಸನ ಹೆಸರಲ್ಲಿ ಕೊಡಮಾಡುವ ಎನ್. ಶೈಲಜಾ ಹಾಸನ ದತ್ತಿ – ಪ್ರಬಂಧ ಮಾಣಿಕ್ಯ ಪ್ರಶಸ್ತಿ 2025ಕ್ಕೆ 2024ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ಲಲಿತ ಪ್ರಬಂಧ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಅತ್ಯುತ್ತಮ ಒಂದು ಕೃತಿಗೆ ರೂ.3,000/- ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ.
ದಿ. ಶಾಂತಮ್ಮ ನಾಗರಾಜ್ ಸ್ಮಾರಕ ದತ್ತಿ – ಹಾಸ್ಯ ಮಾಣಿಕ್ಯ ಪ್ರಶಸ್ತಿ 2025 (ಹಾಸ್ಯ ಪ್ರಬಂಧ ವಿಭಾಗ) :
ಹಿರಿಯ ಸಾಹಿತಿ ತುರುವೇಕೆರೆ ಪ್ರಸಾದ್ ಪ್ರಾಯೋಜಿತ ದಿ. ಶಾಂತಮ್ಮ ನಾಗರಾಜ್ ಸ್ಮಾರಕ ದತ್ತಿ – ಹಾಸ್ಯ ಮಾಣಿಕ್ಯ ಪ್ರಶಸ್ತಿ 2025ಕ್ಕೆ 2024ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ಹಾಸ್ಯ ಪ್ರಬಂಧ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಅತ್ಯುತ್ತಮ ಒಂದು ಕೃತಿಗೆ ರೂ.3,000/- ನಗದು, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ.
ದಿ. ನಿಂಗಪ್ಪ ಮಲ್ಲಪ್ಪ ಮೇಟಿ ಸ್ಮಾರಕ ದತ್ತಿ – ಸಂಶೋಧನಾ ಮಾಣಿಕ್ಯ ಪ್ರಶಸ್ತಿ 2025 (ಸಂಶೋಧನಾ ವಿಭಾಗ) :
ಮುಂಬಯಿ ಸಾಹಿತಿ ವಿಶ್ವೇಶ್ವರ ಎನ್. ಮೇಟಿ ಅವರು ಕೊಡಮಾಡುವ ದಿ. ನಿಂಗಪ್ಪ ಮಲ್ಲಪ್ಪ ಮೇಟಿ ಸ್ಮಾರಕ ದತ್ತಿ – ಸಂಶೋಧನಾ ಮಾಣಿಕ್ಯ ಪ್ರಶಸ್ತಿ 2025ಕ್ಕೆ 2024ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ಸ್ವತಂತ್ರ ಸಂಶೋಧನಾ ಕೃತಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಒಂದು ಅತ್ಯುತ್ತಮ ಕೃತಿಗೆ ರೂ.3,000/- ನಗದು, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ.
ದಿ. ದೊಡ್ಡ ಚಂದಪ್ಪ ತಳ್ಳಿ ಪಾಟೀಲ ಸ್ಮಾರಕ ದತ್ತಿ – ವಚನ ಮಾಣಿಕ್ಯ ಪ್ರಶಸ್ತಿ 2025 (ವಚನ ಸಾಹಿತ್ಯ ವಿಭಾಗ) :
ಮುಂಬಯಿ ಹಿರಿಯ ಸಾಹಿತಿ ಡಾ. ಅಮರೇಶ ಪಾಟೀಲ ಅವರು ಕೊಡಮಾಡುವ ದಿ. ದೊಡ್ಡ ಚಂದಪ್ಪ ತಳ್ಳಿ ಪಾಟೀಲ ಸ್ಮಾರಕ ದತ್ತಿ – ವಚನ ಮಾಣಿಕ್ಯ ಪ್ರಶಸ್ತಿ 2025ಕ್ಕೆ 2024ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ಆಧುನಿಕ ವಚನ ಸಂಕಲನ / ವಚನ ವಿಮರ್ಶೆ / ಶರಣ ಸಾಹಿತ್ಯಕ್ಕೆ ಸಂಬಂಧಪಟ್ಟ ಕೃತಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಒಂದು ಅತ್ಯುತ್ತಮ ಕೃತಿಗೆ ರೂ.3,000/- ನಗದು, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ.
ಪ್ರಭಾವತಿ ಶೆಡ್ತಿ ದತ್ತಿ – ನಾಟಕ ಮಾಣಿಕ್ಯ ಪ್ರಶಸ್ತಿ 2025 (ನಾಟಕ ವಿಭಾಗ) :
ಹಿರಿಯ ಸಾಹಿತಿ ಪ್ರಭಾವತಿ ಶಡ್ತಿ ಹೆಸರಲ್ಲಿ ಕೊಡಮಾಡುವ ಪ್ರಭಾವತಿ ಶೆಡ್ತಿ ದತ್ತಿ – ನಾಟಕ ಮಾಣಿಕ್ಯ ಪ್ರಶಸ್ತಿ 2025ಕ್ಕೆ 2024ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ಕನ್ನಡ ನಾಟಕ ಸ್ವತಂತ್ರ ಕೃತಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಒಂದು ಅತ್ಯುತ್ತಮ ಕೃತಿಗೆ ರೂ.2,500/- ನಗದು, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ.
ದಿ. ಮಹಾದೇವಮ್ಮ ಈ. ಕೃಷ್ಣಯ್ಯ ಸ್ಮಾರಕ ದತ್ತಿ – ಕಾದಂಬರಿ ಮಾಣಿಕ್ಯ ಪ್ರಶಸ್ತಿ 2025 (ಕಾದಂಬರಿ ವಿಭಾಗ) :
ಉದಯೋನ್ಮುಖ ಕವಯಿತ್ರಿ ಲತಾಮಣಿ ಎಂ.ಕೆ. ತುರುವೇಕೆರೆ ಅವರು ಕೊಡಮಾಡುವ ದಿ. ಮಹಾದೇವಮ್ಮ ಈ. ಕೃಷ್ಣಯ್ಯ ಸ್ಮಾರಕ ದತ್ತಿ – ಕಾದಂಬರಿ ಮಾಣಿಕ್ಯ ಪ್ರಶಸ್ತಿ 2025ಕ್ಕೆ 2024ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ಕನ್ನಡ ಕಾದಂಬರಿ ಸ್ವತಂತ್ರ ಕೃತಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಒಂದು ಅತ್ಯುತ್ತಮ ಕೃತಿಗೆ ರೂ.2,500/- ನಗದು, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ.
ದಿ. ಫಾತಿಮಾಭಿ ಜನಾಬ್ ಸೈಯದ್ ಅಬ್ದುಲ್ ಘನೀ ಸಾಬ್ ಸ್ಮಾರಕ ದತ್ತಿ – ಗಜಲ್ ಮಾಣಿಕ್ಯ ಪ್ರಶಸ್ತಿ 2025 (ಗಜಲ್ ವಿಭಾಗ) :
ಹಿರಿಯ ಸಾಹಿತಿ ಡಾ. ಹಸೀನಾ ಎಚ್.ಕೆ. ಅವರು ಕೊಡಮಾಡುವ ದಿ. ಫಾತಿಮಾಭಿ ಜನಾಬ್ ಸೈಯದ್ ಅಬ್ದುಲ್ ಘನೀ ಸಾಬ್ ಸ್ಮಾರಕ ದತ್ತಿ ಗಜಲ್ ಮಾಣಿಕ್ಯ ಪ್ರಶಸ್ತಿ 2025ಕ್ಕೆ 2024ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ಕನ್ನಡ ಗಜಲ್ ಸ್ವತಂತ್ರ ಕೃತಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಒಂದು ಅತ್ಯುತ್ತಮ ಕೃತಿಗೆ ರೂ.2,500/- ನಗದು, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ.
ಪದ್ಮಾವತಿ ವೆಂಕಟೇಶ್ ದತ್ತಿ – ಕಥಾ ಮಾಣಿಕ್ಯ ಪ್ರಶಸ್ತಿ 2025 (ಕಥಾ ವಿಭಾಗ) :
ಕವಯಿತ್ರಿ ಪದ್ಮಾವತಿ ವೆಂಕಟೇಶ್ ಹೆಸರಲ್ಲಿ ಕೊಡಮಾಡುವ ಪದ್ಮಾವತಿ ವೆಂಕಟೇಶ್ ದತ್ತಿ – ಕಥಾ ಮಾಣಿಕ್ಯ ಪ್ರಶಸ್ತಿ 2025ಕ್ಕೆ 2024ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ಸ್ವತಂತ್ರ ಕಥಾ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಅತ್ಯುತ್ತಮ ಒಂದು ಕೃತಿಗೆ ರೂ.2,500/- ನಗದು, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ.
ಕೆ.ವೈ. ಕಂದಕೂರ ದತ್ತಿ – ಚುಟುಕು ಮಾಣಿಕ್ಯ ಪ್ರಶಸ್ತಿ 2025 (ಚುಟುಕು / ಹನಿಗವಿತೆ ವಿಭಾಗ) :
ಹಿರಿಯ ಸಾಹಿತಿ ರೇಷ್ಮಾ ಕಂದಕೂರ ಕೊಡಮಾಡುವ ಕೆ.ವೈ. ಕಂದಕೂರ ದತ್ತಿ – ಚುಟುಕು ಮಾಣಿಕ್ಯ ಪ್ರಶಸ್ತಿ 2025ಕ್ಕೆ 2024ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ಸ್ವತಂತ್ರ ಚುಟುಕು ಸಂಕಲನಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಅತ್ಯುತ್ತಮ ಒಂದು ಕೃತಿಗೆ ರೂ.2,500/- ನಗದು, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ.