ಬೆಂಗಳೂರು : ಡ್ರಾವಿಡ ಭಾಷಾ ಅನುವಾದಕರ ಸಂಘದ ವತಿಯಿಂದ ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳನ್ನು ಆಹ್ವಾನಿಸಿದೆ. ಈ ಪ್ರಶಸ್ತಿ ತಮಿಳು, ಮಲಯಾಳಂ, ತೆಲುಗು ಅಥವಾ ತುಳು ಭಾಷೆಗಳಿಂದ ಕನ್ನಡಕ್ಕೆ ಭಾಷಾಂತರ ಮಾಡಿರುವ ಕಾದಂಬರಿಗೆ ನೀಡಲಾಗುವುದು.
ಕೃತಿಗಳು 2023 ಅಥವಾ 2024ರಲ್ಲಿ ಪ್ರಕಟವಾಗಿರಬೇಕು. ಅರ್ಜಿದಾರರು ಮೂಲ ಕೃತಿಯ ಒಂದು ಪ್ರತಿ ಹಾಗೂ ಭಾಷಾಂತರಿತ ಕನ್ನಡ ಆವೃತ್ತಿಯ ಮೂರು ಪ್ರತಿಗಳನ್ನು ದಿನಾಂಕ 20 ಜೂನ್ 2025ರ ಒಳಗಾಗಿ ಅಧ್ಯಕ್ಷರು, ಡಿ.ಬಿ.ಟಿ.ಎ., ಶ್ರೀ ಭೈರವೇಶ್ವರ ನಿಲಯ, ಇಮ್ಮಡಿ ಹಳ್ಳಿ ಮುಖ್ಯ ರಸ್ತೆ, ಹಗದೂರು, ವೈಟ್ ಫೀಲ್ಡ್, ಬೆಂಗಳೂರು-560066 ಎಂಬ ವಿಳಾಸಕ್ಕೆ ಕಳುಹಿಸಬಹುದು.
ಈ ಪ್ರಶಸ್ತಿಗೆ ರೂ.11,111/- ನಗದು ಪುರಸ್ಕಾರವಿದ್ದು, ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಸಂಘದ ನಾಲ್ಕನೇ ವಾರ್ಷಿಕ ಮಹಾಸಭೆಯ ವೇಳೆ ಪ್ರದಾನ ಮಾಡಲಾಗುವುದು ಎಂದು ಸಂಸ್ಥಾಪಕ ಅಧ್ಯಕ್ಷೆ ಡಾ. ಸುಷ್ಮಾ ಶಂಕರ್ ಇವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು: 9901041889, ಕಾರ್ಯದರ್ಶಿ: 9731561354 ಸಂಖ್ಯೆಯನ್ನು ಸಂಪರ್ಕಿಸಬಹುದು.