ಕಾಸರಗೋಡು : ಇರಾ ನೇಮು ಪೂಜಾರಿಯವರು ಕವಿಯಾಗಿ, ಸಾಹಿತಿಯಾಗಿ ಮಂಗಳೂರು ಕಾರಾಗೃಹದಲ್ಲಿ ಕೈದಿಗಳಿಗೆ ಒಂದು ತಿಂಗಳು ಮೇಲ್ಪಟ್ಟು ಕನ್ನಡ ಕಲಿಕೆ ಕಾರ್ಯಕ್ರಮ, ತಾಲೂಕು ಚುಟುಕು ಸಾಹಿತ್ಯ ಸಮ್ಮೇಳನ, ಜಿಲ್ಲಾ ಸಮ್ಮೇಳನ, ರಾಜ್ಯ ಸಮ್ಮೇಳನ, ದೆಹಲಿಯಲ್ಲಿ ಕನ್ನಡ ಸಂಘದಲ್ಲಿ ಕವಿಗೋಷ್ಠಿ, ವಿವಿಧ ಜಿಲ್ಲೆಯಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ, ಡೆನ್ಮಾರ್ಕ್ ದೇಶದವರೊಂದಿಗೆ ಹೆಚ್ಚಿನ ಶಿಕ್ಷಣ ಪಡೆದು, ಸುಮಾರು 12 ಕೃತಿ ರಚನೆ, ಸಾಕ್ಷರತೆಯಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ, ಧಾರ್ಮಿಕ ಕ್ಷೇತ್ರದಲ್ಲಿ, ಸಾಹಿತ್ಯ ಕಾರ್ಯಕ್ರಮ, ಕೃತಿ ಬಿಡುಗಡೆ ಹೀಗೆ ಕನ್ನಡದ ಸೇವೆ ಮಾಡಿರುವುದನ್ನು ಗಮನಿಸಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ದಿನಾಂಕ 22 ಫೆಬ್ರುವರಿ 2026ರಂದು ಕಾಸರಗೋಡು ಕನ್ನಡ ಭವನದಲ್ಲಿ ಜರಗಲಿರುವ ಚುಟುಕು ಸಾಹಿತ್ಯ ಸಮ್ಮೇಳದಲ್ಲಿ ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು ಸರ್ವಧ್ಯಕ್ಷರಾಗಿರುವ ವೇದಿಕೆಯಲ್ಲಿ ‘ಕವಿ ಕಾವ್ಯ ವಿಭೂಷಣ ಪ್ರಶಸ್ತಿ’ ನೀಡಿ ಗೌರವಿಸಲಾಗುವುದೆಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ರವರು ತಿಳಿಸಿರುತ್ತಾರೆ. ಇದೇ ಸಂದರ್ಭದಲ್ಲಿ 101 ಮಂದಿಯಿಂದ ಭಜನಾ ಕಾರ್ಯಕ್ರಮ, ಮೆರವಣಿಗೆ, ಉದ್ಘಾಟನೆ, ವಿಚಾರ ಗೋಷ್ಠಿ, ಕವಿಗೋಷ್ಠಿ, ಪ್ರಶಸ್ತಿ ಪ್ರದಾನ, ಯಕ್ಷಗಾನ ಮೊದಲಾದ ಕಾರ್ಯಕ್ರಮ ಜರಗಲಿದೆ.
