ಮಂಗಳೂರು : ಚಿರಂತನ ಚಾರಿಟೇಬಲ್ ಟ್ರಸ್ಟ್, ಸಪ್ತಕ ಬೆಂಗಳೂರು, ಐ.ಟಿ.ಸಿ. ಸಂಗೀತ ರಿಸರ್ಚ್ ಅಕಾಡೆಮಿ ಮತ್ತು ರಾಮಕೃಷ್ಣ ಮಠ ಮಂಗಳೂರು ಜಂಟಿಯಾಗಿ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಸ್ವಾಮಿ ವಿವೇಕಾನಂದರ ಜನ್ಮದಿನ ಪ್ರಯುಕ್ತ ಪ್ರಸ್ತುತ ಪಡಿಸುವ ‘ಐ.ಟಿ.ಸಿ. ಮಿನಿ ಸಂಗೀತ ಸಮ್ಮೇಳನ’ವನ್ನು ದಿನಾಂಕ 12 ಜನವರಿ 2025ರಂದು ಬೆಳಗ್ಗೆ 10-00 ಗಂಟೆಗೆ ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮನಂದಾಜಿ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದಾರೆ. ಕೋಲ್ಕತಾದ ಶ್ರೀಮತಿ ಶತವಿಷ ಮುಖರ್ಜಿ ಇವರ ಹಾಡುಗಾರಿಕೆಗೆ ಬೆಂಗಳೂರಿನ ಗುರುಮೂರ್ತಿ ವೈದ್ಯ ತಬಲಾದಲ್ಲಿ ಮತ್ತು ಉಡುಪಿಯ ಶ್ರೀ ಪ್ರಸಾದ್ ಕಾಮತ್ ಇವರು ಸಂವಾದಿನಿಯಲ್ಲಿ ಸಹಕರಿಸಲಿದ್ದಾರೆ. ಶ್ರೀ ಬ್ರಜೇಶ್ವರ ಮುಖರ್ಜಿ ಇವರ ಹಾಡುಗಾರಿಕೆಗೆ ಕೋಲ್ಕತಾದ ಶ್ರೀ ಆಶಿಶ್ ಪಾಲ್ ತಬಲಾದಲ್ಲಿ ಮತ್ತು ಮುಂಬೈ ಶ್ರೀ ಸಿದ್ಧೇಶ್ ಬಿಚೊಳ್ಕರ್ ಸಂವಾದಿನಿಯಲ್ಲಿ ಸಾಥ್ ನೀಡಲಿದ್ದಾರೆ.