ಕೊಪ್ಪಳ :ಶಕ್ತಿ ಶಾರದೆಯ ಮೇಳ ಭಾಗ್ಯನಗರ ಸಂಸ್ಥೆಯು ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯ, ಸಾಂಸ್ಕೃತಿಕ, ಕಲಾ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ (ರಿ.) ಕೊಪ್ಪಳ ಇವರ ಸಹಯೋಗದಲ್ಲಿ ಆಯೋಜಿಸಿದ ಡಾ. ಸತ್ಯಾನಂದ ಪಾತ್ರೋಟ ಇವರ ಆತ್ಮಕಥನ ‘ಜಾಲಿ ಮರದಲ್ಲೊಂದು ಜಾಜಿ ಮಲ್ಲಿಗೆ’ ಕೃತಿಯ ಲೋಕಾರ್ಪಣಾ ಸಮಾರಂಭವು 28 ಜುಲೈ 2024ರಂದು ಕೊಪ್ಪಳದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆಯಿತು.
ಡಿ. ಎಂ. ಬಡಿಗೇರ ಇವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕವಿಗಳಾದ ಶ್ರೀಮತಿ ಮಾಲಾ ಬಡಿಗೇರ ಕೃತಿ ಲೋಕಾರ್ಪಣೆ ಗೊಳಿಸಿದರು. ಹುಬ್ಬಳ್ಳಿ ಸರಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ವೈ. ಎಂ. ಭಜಂತ್ರಿ ಕೃತಿ ಕುರಿತು ಮಾತನಾಡಿದರು. ಕವಿ ನುಡಿಯನ್ನು ಡಾ. ಸತ್ಯಾನಂದ ಪಾತ್ರೋಟ ನಡೆಸಿಕೊಟ್ಟರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿಗಳಾದ ಎ. ಎಂ. ಮದರಿ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಡಾ. ಪಾತ್ರೋಟ್ ಅವರಿಗೆ ಅವರ ಸ್ನೇಹಿತರು ಹಾಗೂ ಅಭಿಮಾನಿಗಳು ವಿಶೇಷ ಪ್ರೀತಿ-ವಿಶ್ವಾಸದಿಂದ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಅಂಚೆ ಇಲಾಖೆಯ ಕರ್ತವ್ಯದಿಂದ ನಿವೃತ್ತರಾದ ರವಿ ಕಾಂತನವರ್ ಅವರಿಗೆ ಸನ್ಮಾನ ನೆರವೇರಿಸಲಾಯಿತು.
ರಮೇಶ ಬನ್ನಿಕೊಪ್ಪ ಮತ್ತು ಮಂಜುಳಾ ಶ್ಯಾವಿಯವರು ಪಾತ್ರೋಟ್ ಇವರ ಕವನ ವಾಚನ ಜರುಗಿತು. ಜಾನಪದ ಅಕಾಡೆಮಿಯ ಸದಸ್ಯರಾದ ಮಹೆಬೂಬ ಕಿಲ್ಲೇದಾರ ಮತ್ತು ಜನಪದ ಕಲಾವಿದರಾದ ಮರಿಯಪ್ಪ ಚಾಮಲಾಪುರ ಇವರಿಂದ ಗೀತಗಾಯನ ಕಾರ್ಯಕ್ರಮದ ನಡೆಯಿತು. 5 ನೇ ತರಗತಿಯ ವಿದ್ಯಾರ್ಥಿ ಮಹಮ್ಮದ್ ರಿಯಾನ್ 5 ನೇ ತರಗತಿಯ ಪಠ್ಯ ದಲ್ಲಿರುವ ಡಾ. ಪಾತ್ರೋಟರ ಕವಿತೆಯನ್ನು ಹಾಡಿದನು.
ಡಿ. ಎಂ. ಬಡಿಗೇರ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಮಹೇಶ್ ಬಳ್ಳಾರಿ ಕಾರ್ಯಕ್ರಮ ನಿರ್ವಹಿಸಿದರು.