ಕಟೀಲು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು, ಪುತ್ತೂರು ಇವರ ವತಿಯಿಂದ ದಿನಾಂಕ 08-11-2023ರಂದು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲು ಇಲ್ಲಿ ಸೇವಾ ರೂಪವಾಗಿ “ಜಾಂಬವತಿ ಕಲ್ಯಾಣ” ಎಂಬ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಪದ್ಯಾಣ ಗೋವಿಂದ ಭಟ್ ಚೆಂಡೆ ಮದ್ದಳೆಗಳಲ್ಲಿ ರಾಮ್ ಪ್ರಕಾಶ್ ಕಲ್ಲೂರಾಯ, ದುರ್ಗೇಶ್ ಕಟೀಲು ಮುರಳಿ ಕಟೀಲು ಸಹಕರಿಸಿದರು.ಹಿಮ್ಮೇಳದಲ್ಲಿ ಶುಭಾ ಅಡಿಗ (ಶ್ರೀ ಕೃಷ್ಣ), ಪ್ರೇಮಲತಾ ರಾವ್ (ನಾರದ), ಕಿಶೋರಿ ದುಗ್ಗಪ್ಪ ನಡುಗಲ್ಲು (ಜಾಂಬವಂತ) ಹರಿಣಾಕ್ಷಿ.ಜೆ.ಶೆಟ್ಟಿ(ಬಲರಾಮ) ಸಹಕರಿಸಿದರು
ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ ವಂದಿಸಿದರು.ದೇವಳದ ಅನುವಂಶೀಯ ಅರ್ಚಕರಾದ ವೇದಮೂರ್ತಿ ಶ್ರೀ ಹರಿನಾರಾಯಣ ಅಸ್ರಣ್ಣ ಕಲಾವಿದರಿಗೆ ಶ್ರೀ ದೇವಿಯ ಪ್ರಸಾದವನ್ನಿತ್ತು ಹರಸಿದರು.ಕಾರ್ಯಕ್ರಮದ ಬಳಿಕ 2023ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶ್ರೀಮತಿ ಲೀಲಾವತಿ ಹರಿನಾರಾಯಣ ಬೈಪಡಿತ್ತಾಯರ ಬಜಪೆ ಸಮೀಪದ ತಳಕಳದಲ್ಲಿರುವ ನಿವಾಸಕ್ಕೆ ತೆರಳಿ, ಅಲ್ಲಿ ಅವರನ್ನು ದಂಪತಿ ಸಮೇತರಾಗಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.

