ಮಂಗಳೂರು : ಅಶೋಕ ನಗರದಲ್ಲಿರುವ ಶ್ರೀಕೃಷ್ಣ ಮಂದಿರದ ಬೆಳ್ಳಿ ಹಬ್ಬ ವರ್ಷಾಚರಣೆಯ ಉದ್ಘಾಟನಾ ಸಮಾರಂಭ ಗೋಕುಲ ಕಲ್ಯಾಣ ಮಂಟಪದಲ್ಲಿ ದಿನಾಂಕ 07-09-2023ರಂದು ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಮೂಡುಬಿದರೆ ಆಳ್ವಾಸ್ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ವಿದ್ವಾನ್ ಡಾ. ವಿನಾಯಕ ಭಟ್ ಗಾಳಿಮನೆ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಗಳೂರಿನ ಉರ್ವದ ಯಕ್ಷಾರಾಧನ ಕಲಾ ಕೇಂದ್ರದ ನಿರ್ದೇಶಕಿ, ನೃತ್ಯ ವಿದುಷಿ ಸುಮಂಗಲಾ ರತ್ನಾಕರ್ ರಾವ್ ಮತ್ತು ಬಳಗದವರಿಂದ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನಗೊಂಡಿತು. ವಿದುಷಿ ಸುಮಂಗಲಾ ರತ್ನಾಕರ್ ರಾವ್, ಶ್ರೀಮತಿ ಸುಮಾಡ್ಕರ್, ಕುಮಾರಿ ಛಾಯಾಲಕ್ಷ್ಮೀ ಆರ್.ಕೆ., ಆದಿಸ್ವರೂಪ, ಸನತ್ ಆಚಾರ್ಯ, ಸಾಕ್ಷಿ ಶೇಷಾದ್ರಿ, ವೈಶಾಕ್ ರಾವ್, ಸಂಪ್ರೀತ್ ಹಂದೆ, ಪೂರ್ವಿ ಗಟ್ಟಿ, ಪ್ರಜ್ಞಾಶ್ರೀ ಸಾಮಗ, ವರುಣ್ ಕಾರಂತ್, ಸೂರಜ್ ಸಾಮಗ, ಸಮೀಕ್ಷಾ ಆಚಾರ್ಯ, ಪ್ರತೀಕ್ ಜಗತಾಪ್, ಸ್ವಸ್ತಿಕ್ ರಾವ್, ಹಿಮ್ಮೇಳದಲ್ಲಿ ಕವಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ, ಶ್ರೀ ಪ್ರಫುಲ್ಲಚಂದ್ರ ನೆಲ್ಯಾಡಿ, ಶಿತಿಕಂಠ ಭಟ್ ಉಜಿರೆ, ಶ್ರೀ ಸುಬ್ರಹ್ಮಣ್ಯ ಚಿತ್ರಾಪುರ, ಶ್ರೀ ಮುರಾರಿ ಭಟ್ ಪಂಜಿಗದ್ದೆ ಕಲಾವಿದರಾಗಿ ಪಾಲ್ಗೊಂಡಿದ್ದರು. ಶ್ರೀ ಬಿ.ರತ್ನಾಕರ ರಾವ್ ಸಂಯೋಜನೆ, ಸಹಕಾರ ನೀಡಿದರು.
ಶ್ರೀಕೃಷ್ಣ ಮಂದಿರದಲ್ಲಿ ನಡೆದ ಸಭೆಯಲ್ಲಿ ವರ್ಷಾಚರಣೆ ಉತ್ಸವದ ಅಂಗವಾಗಿ ಶ್ರೀಕೃಷ್ಣ ಸೇವಾ ಸಮಿತಿಯನ್ನು ರಚಿಸಿ ಪದಾಧಿಕಾರಿಗಳನ್ನು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಎಸ್.ಜಿ. ಹೆಗಡೆ, ಕಾರ್ಯಾಧ್ಯಕ್ಷರಾಗಿ ಪ್ರಕಾಶ್ ರಾವ್, ಉಪಾಧ್ಯಕ್ಷರಾಗಿ ಭಾನುಮತಿ ಎಸ್. ಕುಮಾರ್, ಮಾಧವಾಚಾರ್, ಗಾಯತ್ರಿ ಭಾಸ್ಕರ್, ವೀಣಾ ಕೃಷ್ಣಮೂರ್ತಿ ರಾವ್, ಪ್ರಭಾಕರ ರಾವ್, ಕಾರ್ಯದರ್ಶಿಯಾಗಿ ಶ್ರೀರಾಮ್ ವಿ. ರಾವ್, ಜೊತೆ ಕಾರ್ಯದರ್ಶಿಗಳಾಗಿ ಗಣೇಶ್ ರಾವ್, ನಂದಕುಮಾರ್, ಮುರಳೀಧರ ಸೋಮಯಾಜಿ, ವಾದಿರಾಜ ಆಚಾರ್, ಉದಯಕುಮಾರಿ, ಕೋಶಾಧಿಕಾರಿಯಾಗಿ ವೆಂಕಟೇಶ್ ರಾವ್, ಹಣಕಾಸು ವಿಭಾಗಕ್ಕೆ ಕಮಲೇಶ್ ರಾವ್, ಧಾರ್ಮಿಕ ಕಾರ್ಯಕ್ರಮ ವಿಭಾಗಕ್ಕೆ ನಳಿನಿ ಮೋಹನ್ ದಾಸ್, ವಿಶಾಲ ರಾವ್, ಬಿ. ಸಾವಿತ್ರಿ ರಾವ್, ಪ್ರತೀಕ್ ರಾವ್ ಅವರು ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರನ್ನೂ ಈ ಸಂದರ್ಭದಲ್ಲಿ ಆರಿಸಲಾಯಿತು.