ಕಾಸರಗೋಡು : ಬದಿಯಡ್ಕದ ಸಮೀಪದ ಮೂಲಡ್ಕ ಉದನೇಶ್ವರ ಪ್ರಸಾದ್ ಇವರ ಮಾತೃಶ್ರೀ ಲಕ್ಷ್ಮೀ ಅಮ್ಮನ 84ನೇ ಹುಟ್ಟುಹಬ್ಬದ ಧಾರ್ಮಿಕ ಕಾರ್ಯಕ್ರಮದ ಬಾಬ್ತು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ವತಿಯಿಂದ ‘ಜಾಂಬವತಿ ಕಲ್ಯಾಣ’ ತಾಳಮದ್ದಳೆಯು ದಿನಾಂಕ 20-04-2024ರಂದು ನಡೆಯಿತು.
ಹಿಮ್ಮೇಳದಲ್ಲಿ ಭವ್ಯಶ್ರೀ ಕುಲ್ಕುಂದ, ಪುಂಡಿಕಾಯಿ ರಾಜೇಂದ್ರ ಪ್ರಸಾದ್, ಲಕ್ಷ್ಮೀಶ ಬೇಂಗ್ರೋಡಿ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಅಡಿಗ, ಶುಭಾ ಗಣೇಶ್, ಕಿಶೋರಿ ದುಗ್ಗಪ್ಪ ನಡುಗಲ್ಲು, ಮನೋರಮಾ ಜಿ. ಭಟ್ ಸಹಕರಿಸಿದರು. ಸಂಚಾಲಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ಮೂಲಡ್ಕ ಉದನೇಶ್ವರ ಪ್ರಸಾದ್ ವಂದಿಸಿದರು.