ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರಿನ ಇದರ ‘ಪತ್ತನಾಜೆ’ ಕೂಟವು ದಿನಾಂಕ 24- 5-2024 ರಂದು ಪುತ್ತೂರಿನ ಓ೦ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ’ಜಾಂಬವತಿ ಕಲ್ಯಾಣ’ ಪ್ರಸಂಗದೊಂದಿಗೆ ಸಂಪನ್ನಗೊಂಡಿತು.
ಹಿಮ್ಮೇಳದಲ್ಲಿ ಯಲ್. ಯನ್. ಭಟ್ , ಸತೀಶ್ ಇರ್ದೆ , ಆನಂದ ಸವಣೂರು , ನಿತೀಶ್ ಎಂಕಣ್ಣಮೂಲೆ , ಪ್ರೊ. ದಂಬೆ ಈಶ್ವರ ಶಾಸ್ತ್ರೀ , ಮುರಳೀಧರ ಕಲ್ಲೂರಾಯ, ಪರೀಕ್ಷಿತ್ ಪುತ್ತೂರು ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಕೃಷ್ಣನಾಗಿ ಭಾಸ್ಕರ್ ಬಾರ್ಯ ಮತ್ತು ಭಾಸ್ಕರ್ ಶೆಟ್ಟಿ ಸಾಲ್ಮರ, ಜಾಂಬವಂತನಾಗಿ ಪೂಕಳ ಲಕ್ಷ್ಮೀನಾರಾಯಣ ಭಟ, ಬಲರಾಮನಾಗಿ ಮಾಂಬಾಡಿ ವೇಣುಗೋಪಾಲ ಭಟ್, ನಾರದನಾಗಿ ಚಂದ್ರಶೇಖರ್ ಭಟ್ ಬಡೆಕ್ಕಿಲ ಹಾಗೂ ಜಾಂಬವತಿಯಾಗಿ ಪ್ರೇಮಲತಾ ಟಿ. ರಾವ್ ಪಾತ್ರ ನಿರ್ವಹಿಸಿದರು. ಟಿ. ರಂಗನಾಥ ರಾವ್ ಸ್ವಾಗತಿಸಿ ಹರೀಣಾಕ್ಷಿ ಜೆ. ಶೆಟ್ಟಿ ವಂದಿಸಿದರು.

