ಮಂಗಳೂರು: ಪದ್ಮಭೂಷಣ ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರು ಹಾಡಿದ ಕನ್ನಡ ಗೀತೆಗಳನ್ನು ನಿರರ್ಗಳ 24 ಗಂಟೆಗಳ ಹಾಡಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ವಿಶ್ವ ದಾಖಲೆ ಮಾಡಿದ ವಿದ್ವಾನ್ ಯಶವಂತ್ ಎಂ. ಜಿ. ಅವರಿಗೆ ‘ಜನಮಾನಸ ಗೌರವ’ ಸಮಿತಿ ವತಿಯಿಂದ ‘ಜನಮಾನಸ ಗೌರವ- ಅಭಿನಂದನಾ ಸಮಾರಂಭ ದಿನಾಂಕ 04 ಅಕ್ಟೋಬರ್ 2025 ರಂದು ಸಂಜೆ ಘಂಟೆ 7.00ಕ್ಕೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.
ಸ್ಪೀಕರ್ ಯು. ಟಿ. ಖಾದರ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ.ವೈ. ಭರತ್ ಶೆಟ್ಟಿ, ಉದ್ಯಮಿ ಬಂಜಾರ ಪ್ರಕಾಶ ಶೆಟ್ಟಿ, ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮಕ್ಕೂ ಮುನ್ನ ಹಾಗೂ ಬಳಿಕ ಸಂಗೀತ ರಸಮಂಜರಿ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಸುಶಾಂತ್ ಭಂಡಾರಿ ತಿಳಿಸಿದ್ದಾರೆ.