ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ, ಉಡುಪಿ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ತು (ರಿ.) ಉಡುಪಿ ಜಿಲ್ಲೆ, ತಲ್ಲೂರ್ ಫ್ಯಾಮಿಲಿ ಟ್ರಸ್ಟ್ (ರಿ.) ಹಾಗೂ ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಉಡುಪಿ ಆಯೋಜಿಸುವ ‘ಜಾನಪದ ಹಬ್ಬ-2024’ ಕಾರ್ಯಕ್ರಮವು ದಿನಾಂಕ 27 ಅಕ್ಟೋಬರ್ 2024ರ ರವಿವಾರದಂದು ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.
ಬೆಂಗಳೂರಿನ ಆದಾನಿ ಸಮೂಹದ ಅಧ್ಯಕ್ಷರು ಮತ್ತು ಕಾರ್ಯ ನಿರ್ವಾಹಕ ನಿರ್ದೇಶಕರಾದ ಶ್ರೀ ಕಿಶೋರ್ ಆಳ್ವ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗುಜ್ಜಾಡಿ ಸ್ವರ್ಣ ಜುವೆಲ್ಲರ್ ಉಡುಪಿ ಇದರ ಮುಖ್ಯ ಹಣಕಾಸು ಅಧಿಕಾರಿಯಾದ ಶ್ರೀ ವರುಣ್ ರಾಮದಾಸ ನಾಯಕ್ ಗುಜ್ಜಾಡಿ ಹಾಗೂ ಉಡುಪಿಯ ಯಕ್ಷಗಾನ ಕಲಾರಂಗ (ರಿ.) ಇದರ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಮುರಳಿ ಕಡೆಕಾರು ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಉಡುಪಿಯ ಐಯ್ಯಂಗಾರ್ ಯೋಗ ಟೀಚರ್ ಶ್ರೀಮತಿ ಶೋಭಾ ಶೆಟ್ಟಿ ಇವರಿಗೆ “ಜಾನಪದ ಸಾಂಸ್ಕೃತಿಕ ಯೋಗ ಸಾಧಕ ಪ್ರಶಸ್ತಿ ಪುರಸ್ಕಾರ” ನೀಡಿ ಗೌರವಿಸಲಾಗುವುದು.
ಸಭಾಕಾರ್ಯಕ್ರಮದ ಬಳಿಕ ಶಂಕರ್‌ದಾಸ್ ಚಂಡ್ಕಳ ಇವರ ಸಂಯೋಜನೆಯಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ತೊಟ್ಟಂ ಹಾಗೂ ಶ್ರೀ ಪಂಡರಿನಾಥ ಭಜನಾ ಮಂಡಳಿ ಬಡನಿಡಿಯೂರು ಇದರ ಸದಸ್ಯರಿಂದ ಕುಣಿತ ಭಜನೆ, ಶ್ರೀ ದೇವಿ ಮರಾಠಿ ಜಾನಪದ ಮತ್ತು ಸಾಂಸ್ಕೃತಿಕ ಕಲಾ ಸಂಘ ಕೆಳಕುಂಜಾಲು ನೀಲಾವರ ಇದರ ಸದಸ್ಯರಿಂದ ಹೋಳಿ ಕುಣಿತ, ಮಂಚಿಯ ದಯಾನಂದ ನಾಯ್ಕ ಮತ್ತು ಬಳಗದಿಂದ ಗೋಂದೋಳು, ಪಾಂಡುರಂಗ ಪಡ್ಡಮ ಮತ್ತು ಬಳಗದವರಿಂದ ಜಾನಪದ ವಾದ್ಯಗೋಷ್ಠಿ, ಕಲಾಮಯಂ ಉಡುಪಿ ತಂಡದಿಂದ ಜಾನಪದ ವೈವಿಧ್ಯ ಹಾಗೂ ವಿಶೇಷ ಆಕರ್ಷಣೆಯಾಗಿ ಕೇರಳದ ‘ಗೋತ್ರಂ’ ಜಾನಪದ ನೃತ್ಯ ಪ್ರಸ್ತುತಗೊಳ್ಳಲಿದೆ.