12-04-2023,ಮಡಿಕೇರಿ: ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ವತಿಯಿಂದ ಮತದಾನದ ಮಹತ್ವ ಸಾರುವ ನಿಟ್ಟಿನಲ್ಲಿ ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ಸಹಯೋಗದಲ್ಲಿ ಏ.15 ರಂದು ‘ವಿಶ್ವ ಚಿತ್ರಕಲಾ ದಿನಾಚರಣೆ’ಯನ್ನು ಆಚರಿಸಲಾಗುತ್ತಿದೆ. ಅಂದು ಬೆಳಿಗ್ಗೆ 10 ಗಂಟೆಯಿಂದ ನಗರದ ರಾಜಾಸೀಟ್‌ನಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ .ವಿಶ್ವಚಿತ್ರಕಲಾ ದಿನದ ಅಂಗವಾಗಿ ಜಿಲ್ಲೆಯ ಕಲಾವಿದರು ಕೂಡ ವೈವಿಧ್ಯಮಯ ಕಲಾಕೃತಿಗಳನ್ನು ರಚಿಸಲಿದ್ದಾರೆ. ಈ ಸ್ಪರ್ಧೆಯಲ್ಲಿ ‘ಮತದಾನದ ಮಹತ್’ ಎಂಬ ವಿಷಯದಲ್ಲಿ ಚಿತ್ರಗಳನ್ನು ರಚಿಸಬಹುದಾಗಿದೆ. ಚಿತ್ರಕಲೆಗೆ ಅಗತ್ಯ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು. ಇದೇ ಸಂದರ್ಭ ‘ನಾನು ಮತದಾನ ಮಾಡುತ್ತೇನೆ’ ಎಂಬ ಬೃಹತ್ ಕ್ಯಾನ್ವಾಸ್ ಅನ್ನು ರಾಜಾಸೀಟ್‌ನಲ್ಲಿ ಕಲಾವಿದರು ರಚಿಸಲಿದ್ದು, ಸಾರ್ವಜವಿಕರು ಕೂಡ ಕ್ಯಾನ್ವಸ್‌ನಲ್ಲಿ ತಮ್ಮ ಸಂದೇಶ ಸಾರಲು ಅವಕಾಶ ನೀಡಲಾಗಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕ – 98440 60174 ಅನಿಲ್ ಎಚ್.ಟಿ. ಅಧ್ಯಕ್ಷರು, ಮಡಿಕೇರಿ ತಾಲೂಕು ಜಾನಪದ ಪರಿಷತ್, ಮಡಿಕೇರಿ.
Subscribe to Updates
Get the latest creative news from FooBar about art, design and business.
Previous Articleಮಂಗಳೂರಿನ ಗಾನ-ನೃತ್ಯ ಅಕಾಡೆಮಿಗೆ ಭರತನಾಟ್ಯ ಪರೀಕ್ಷೆಗಳಲ್ಲಿ 100% ಫಲಿತಾಂಶ
Next Article ಶಾಂಭವಿ ತೀರದಲ್ಲಿ ಖ್ಯಾತ ಕವಿ ಚೊಕ್ಕಾಡಿಯವರ ಮನದ ಮಾತು