ಹೊಸಕೋಟೆ: ಹೊಸಕೋಟೆ ತಾಲೂಕಿನ ‘ಜನಪದರು’ ಸಾಂಸ್ಕೃತಿಕ ವೇದಿಕೆ, ಪ್ರತೀ ತಿಂಗಳ ಎರಡನೇ ಶನಿವಾರದಂದು ಆಯೋಜಿಸುವ ನಾಟಕ ಸರಣಿ ‘ರಂಗ ಮಾಲೆ -71’ ದಿನಾಂಕ 10-06-2023ರಂದು ನಡೆಯಿತು. ಈ ಬಾರಿ ಬೆಂಗಳೂರಿನ ರೂಪಾಂತರ ರಂಗ ತಂಡ ಪ್ರಸ್ತುತ ಪಡಿಸಿದ ಜ್ಞಾನಪೀಠ ಪುರಸ್ಕೃತ ಡಾ. ಶಿವರಾಮ ಕಾರಂತರ ಮಹತ್ವದ ಕಾದಂಬರಿ ‘ಚೋಮನ ದುಡಿ’ ಪ್ರದರ್ಶನಗೊಂಡಿತು. ಈ ಕಾದಂಬರಿಯನ್ನು ರಂಗರೂಪಕ್ಕೆ ಅಳವಡಿಸಿದ ಆರ್. ನಾಗೇಶ್ ಹಾಗೂ ಕೆ.ಎಸ್.ಡಿ.ಎಲ್. ಚಂದ್ರು ಅವರ ನಿರ್ದೇಶನದಲ್ಲಿ ಈ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಉದ್ಘಾಟನೆ ಮಾಡಿದ ವೇದಿಕೆ ಅಧ್ಯಕ್ಷ ಕೆ.ವಿ. ವೆಂಕಟ ರಮಣಪ್ಪ @ ಪಾಪಣ್ಣ ಕಾಟಂನಲ್ಲೂರು “ಕಾರಂತರ ಕೃತಿಗಳಲ್ಲಿ ಸರ್ವಕಾಲಿಕ ಜೀವನ ಮೌಲ್ಯಗಳಿವೆ” ಎಂದರು. ಪ್ರಾಯೋಜಕ ವೇಣು ಜ್ಯೋತಿಪುರ, ನಿರ್ದೇಶಕ ಕೆ.ಎಸ್.ಡಿ.ಎಲ್. ಚಂದ್ರು ಹಾಗೂ ನಟ ಮುರುಡಯ್ಯನವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪದಾಧಿಕಾರಿಗಳಾದ ಸಿದ್ದೇಶ್ವರ, ಜಗದೀಶ್ ಕೆಂಗನಾಳ್, ಎಂ. ಸುರೇಶ್, ಮಮತ ಮುನಿರಾಜು ಉಪಸ್ಥಿತರಿದ್ದರು. ನಾಟಕ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿತು.