ನವ ದೆಹಲಿ : ಖ್ಯಾತ ಸಾಹಿತಿ ವಿನೋದ್ ಕುಮಾರ್ ಶುಕ್ಲಾ ಇವರು ಪ್ರಸಕ್ತ ಸಾಲಿನ ಭಾರತದ ಅತ್ಯುನ್ನತ ಸಾಹಿತ್ಯ ಗೌರವವಾದ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. 88 ವರ್ಷದ ವಿನೋದ್ ಕುಮಾರ್ ಶುಕ್ಲಾ ಅವರು ಭಾರತರತ್ನ ಪಡೆದ ಛತ್ತೀಸ್‌ಗಢದ ಮೊದಲ ಲೇಖಕರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸಿದ್ಧ ಕವಿ, ಸಣ್ಣ ಕಥೆಗಾರ ಮತ್ತು ಪ್ರಬಂಧಕಾರರಾದ ವಿನೋದ್ ಶುಕ್ಲಾ ಈ ಪ್ರಶಸ್ತಿಯನ್ನು ಪಡೆದ 12ನೇ ಹಿಂದಿ ಸಾಹಿತಿಯೂ ಹೌದು. ವಿನೋದ್ ಶುಕ್ಲಾ ಅವರು 11 ಲಕ್ಷ ರೂ. ನಗದು ಬಹುಮಾನ, ಕಂಚಿನ ಸರಸ್ವತಿ ಪ್ರತಿಮೆ ಮತ್ತು ಪಶಸ್ತಿ ಪತ್ರವನ್ನು ಪಡೆಯಲಿದ್ದಾರೆ.