ಉಡುಪಿ : ಸ್ವಾಮಿ ಶ್ರೀ ಬ್ರಹ್ಮಲಿಂಗೇಶ್ವರನ ತಾಣದಲ್ಲಿ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ (ರಿ.) ಇದರ 2ನೇ ವರ್ಷದ ‘ಜನ್ಸಾಲೆ ಯಕ್ಷ ಪರ್ವ 2024’ವನ್ನು ದಿನಾಂಕ 3 ನವೆಂಬರ್ 2024ರಂದು ಮಾರಣಕಟ್ಟೆ ಮೂಕಾಂಬಿಕಾ ಕಲಾ ಮಂಟಪದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಯಕ್ಷ ರಾಘವ ಪ್ರಶಸ್ತಿ, ಕಲಾ ಗೌರವ, ವೈದ್ಯಕೀಯ ನೆರವು, ಗೃಹ ನಿರ್ಮಾಣಕ್ಕೆ ನೆರವು, ಪ್ರತೀಕ್ಷಾ ಪುರಸ್ಕಾರ, ಯಕ್ಷ ಪಂಚ ಸ್ವರ, ಯಕ್ಷಗಾನ ಪ್ರದರ್ಶನಗಳು ನಡೆಯಲಿದೆ.
ಮಧ್ಯಾಹ್ನ 2-00 ಗಂಟೆಗೆ ಬಡಗು ತಿಟ್ಟಿನ ಭಾಗವತರಾದ ಶ್ರೀ ದಿನೇಶ್ ಶೆಟ್ಟಿ, ಶ್ರೀ ಸೃಜನ್ ಗಣೇಶ್ ಹೆಗಡೆ ಮತ್ತು ಶ್ರೀರಕ್ಷಾ ಹೆಗಡೆ ಹಾಗೂ ತೆಂಕು ತಿಟ್ಟಿನ ಭಾಗವತರಾದ ಶ್ರೀಮತಿ ಕಾವ್ಯಶ್ರೀ ಮತ್ತು ಡಾ. ಪ್ರಖ್ಯಾತ್ ಶೆಟ್ಟಿ ಇವರಿಂದ ಯಕ್ಷ ಪಂಚ ಸ್ವರ ಪ್ರಸ್ತುತಗೊಳ್ಳಲಿದ್ದು, ಇವರಿಗೆ ಶ್ರೀ ಎನ್.ಜೆ. ಹೆಗಡೆ, ಶ್ರೀ ಶಶಾಂಕ ಆಚಾರ್ಯ, ಶ್ರೀ ಚಂದ್ರಶೇಖರ ಆಚಾರ್ಯ, ಶ್ರೀ ಶ್ರೀಕಾಂತ್ ಶೆಟ್ಟಿ, ಶ್ರೀ ಶ್ರೀವತ್ಸ ಮತ್ತು ಶ್ರೀ ಪ್ರಶಾಂತ್ ಶೆಟ್ಟಿಯವರು ಸಹಕರಿಸಲಿದ್ದಾರೆ. ಸಂಜೆ 4-30 ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಇದರ ಸ್ಥಾಪಕರಾದ ಶ್ರೀ ನಾಡೋಜ ಡಾ. ಜಿ. ಶಂಕರ್ ಇವರು ಅಧ್ಯಕ್ಷತೆ ವಹಿಸಲಿದ್ದು, ಪ್ರಮುಖ ಗಣ್ಯರ ಉಪಸ್ಥಿತಿಯಲ್ಲಿ ಯಕ್ಷ ರಾಘವ ಪ್ರಶಸ್ತಿ, ಕಲಾ ಕಾಮಧೇನು ಪ್ರಶಸ್ತಿ, ಯಕ್ಷ ಸಂಘಟನಾ ಚತುರ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಪ್ರಖ್ಯಾತ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ರತ್ನಾವತಿ’ ಮತ್ತು ‘ಕರ್ಣಪರ್ವ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.