ಪುತ್ತೂರು : ಬೊಳುವಾರು ಆಂಜನೇಯ ನಗರದ ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯ ಇದರ 84ನೇ ವರ್ಷದ ನವರಾತ್ರಿ ಪೂಜೆಯ ಪ್ರಯುಕ್ತ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಮತ್ತು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಇವರ ವತಿಯಿಂದ ‘ಜಟಾಯು ಮೋಕ್ಷ’ ಮತ್ತು ‘ವಾಲಿ ವಧೆ’ ಎಂಬ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವು ದಿನಾಂಕ 22-10-2023ರಂದು ಬೊಳುವಾರು ಶ್ರೀ ಸುಬ್ರಹ್ಮಣ್ಯ ನಗರದ ಮಹಾಲಿಂಗ ಮಣಿಯಾಣಿ ವೇದಿಕೆಯಲ್ಲಿ ಜರುಗಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ, ಶ್ರೀ ಗಣೇಶ್ ಭಟ್, ಶ್ರೀ ಸತೀಶ್ ಇರ್ದೆ, ಶ್ರೀ ಆನಂದ್ ಸವಣೂರು ಸಹಕರಿಸಿದರು. ಚೆಂಡೆ ಮದ್ದಳೆಗಳಲ್ಲಿ ಶ್ರೀ ಪದ್ಯಾಣ ಶಂಕರನಾರಾಯಣ ಭಟ್, ಶ್ರೀ ದಂಬೆ ಈಶ್ವರ ಶಾಸ್ತ್ರೀ, ಶ್ರೀ ಮುರಳೀಧರ ಕಲ್ಲೂರಾಯ, ಶ್ರೀ ಅಚ್ಯುತ ಪಾಂಗಣ್ಣಾಯ, ಮಾ. ಪರೀಕ್ಷತ್ ಮತ್ತು ಮಾ. ಪ್ರದೀಪ್ ಕೃಷ್ಣ ಸಹಕರಿಸಿದರು.
‘ಜಟಾಯು ಮೋಕ್ಷ’ ಪ್ರಸಂಗದ ಮುಮ್ಮೇಳದಲ್ಲಿ ಶ್ರೀಮತಿ ಶುಭಾ ಗಣೇಶ್ (ಶ್ರೀ ರಾಮ), ಶ್ರೀಮತಿ ಜಯಂತಿ ಹೆಬ್ಬಾರ್ ಮತ್ತು ಶ್ರೀಮತಿ ಮನೋರಮಾ ಜಿ. ಭಟ್ (ಸೀತೆ), ಶ್ರೀಮತಿ ಭಾರತಿ ನೆಲ್ಲಿತ್ತಾಯ (ಲಕ್ಷ್ಮಣ), ಶ್ರೀಮತಿ ಕಿಶೋರಿ ದುಗ್ಗಪ್ಪ ನಡುಗಲ್ಲು (ಜಟಾಯು), ಶ್ರೀಮತಿ ಹರಿಣಾಕ್ಷಿ ಜೆ. ಶೆಟ್ಟಿ (ರಾವಣ), ಶ್ರೀಮತಿ ಭಾರತಿ ರೈ (ಸನ್ಯಾಸಿ ರಾವಣ) ಹಾಗೂ ‘ವಾಲಿ ವಧೆ’ ಪ್ರಸಂಗದಲ್ಲಿ ಶ್ರೀ ಭಾಸ್ಕರ ಬಾರ್ಯ ಮತ್ತು ಗುಂಡ್ಯಡ್ಕ ಈಶ್ವರ ಭಟ್ (ಶ್ರೀ ರಾಮ), ಶ್ರೀ ಪಕಳಕುಂಜ ಶ್ಯಾಮ್ ಭಟ್ (ವಾಲಿ), ಶ್ರೀ ಗುಡ್ಡಪ್ಪ ಬಲ್ಯ (ಸುಗ್ರೀವ), ಶ್ರೀ ದುಗ್ಗಪ್ಪ ನಡುಗಲ್ಲು (ತಾರೆ) ಸಹಕರಿಸಿದರು. ಸಂಘದ ನಿರ್ದೇಶಕ ಶ್ರೀ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು.