ಮಂಡ್ಯ: ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ನೀಡುವ 5ನೇ ವರ್ಷದ ‘ಕೆ.ಎಸ್. ನ ಸಾಹಿತ್ಯ ಪ್ರಶಸ್ತಿ’ಗೆ ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಜಯಪ್ರಕಾಶ ಗೌಡ, ದಕ್ಷಿಣ ಕನ್ನಡ ಜಿಲ್ಲೆಯ ಲೇಖಕ ನಾ. ದಾಮೋದರ ಶೆಟ್ಟಿ ಭಾಜನ ರಾಗಿದ್ದಾರೆ. ‘ಕೆ. ಎಸ್. ನ ಕಾವ್ಯ ಗಾಯನ ಪ್ರಶಸ್ತಿ’ಗೆ ಗಾಯಕರಾದ ಧಾರವಾಡದ ಸಂಗೀತಾ ಕಟ್ಟಿ ಮತ್ತು ಕಾಸರಗೋಡಿನ ರಮೇಶ್ ಚಂದ್ರ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು ತಲಾ ರೂಪಾಯಿ 25 ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ. ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ 23 ಮಾರ್ಚ್ 2025ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷರಾದ ಕಿಕ್ಕೇರಿ ಕೃಷ್ಣಮೂರ್ತಿ ಮಾಹಿತಿ ನೀಡಿದ್ದಾರೆ.
ಪ್ರೊ. ಜಯಪ್ರಕಾಶ ಗೌಡ
ನಾ. ದಾಮೋದರ ಶೆಟ್ಟಿ
ಸಂಗೀತಾ ಕಟ್ಟಿ
ರಮೇಶ್ ಚಂದ್ರ