ಹುಬ್ಬಳ್ಳಿ : ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು (ರಿ.) ಕೇಂದ್ರ ಸಮಿತಿ ಹುಬ್ಬಳ್ಳಿ ಇದರ ವತಿಯಿಂದ ಶ್ರೀ ಕೃಷ್ಣ ಪರ್ಯಾಯ ಶ್ರೀ ಪುತ್ತಿಗೆ ಮಠ ಉಡುಪಿ ಇವರ ಸಹಕಾರದೊಂದಿಗೆ ಕರಾವಳಿ ಕರ್ನಾಟಕ ಐದನೇ ಕಚುಸಾಪ ಸಮ್ಮೇಳನವು ದಿನಾಂಕ 05-05-2024ರಂದು ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.
ಈ ಸಮ್ಮೇಳನವನ್ನು ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀ ಪಾದರು ಇವರ ದಿವ್ಯ ಸಾನಿಧ್ಯದಲ್ಲಿ ಉದ್ಘಾಟನೆ ಮಾಡಲಾಗುವುದು. ಬೆಳಿಗ್ಗೆ ಗಂಟೆ 11-00ರಿಂದ ಕಾಸರಗೋಡಿನ ಡಾ. ವಾಣಿಶ್ರೀ ಹಾಗೂ ಗುರುರಾಜ ಇವರ ಕಲಾ ತಂಡದಿಂದ ಶ್ರೀಕೃಷ್ಣ ನೃತ್ಯ ವೈಭವ ಜರುಗಲಿದೆ. ಮಧ್ಯಾಹ್ನ ಗಂಟೆ 12-00ರಿಂದ ಮೈಸೂರಿನ ಶ್ರೀ ಎನ್.ವಿ. ರಮೇಶ್ ಇವರ ಅಧ್ಯಕ್ಷತೆಯಲ್ಲಿ ಪರ್ಯಾಯ ಪುತ್ತಿಗೆ ಮಠದ ಸಹಕಾರದಿಂದ ‘ಶ್ರೀ ಭಗವದ್ಗೀತೆ ಒಂದು ವಿಶ್ಲೇಷಣೆ’ ವಿಚಾರಗೋಷ್ಠಿ ಜರುಗಲಿದೆ. ಶತಾವಧಾನಿ ಉಡುಪಿ ರಾಮಾನಾಥ ಆಚಾರ್ಯ ದಿಕ್ಕೂಚಿ ಭಾಷಣ, ವಿದ್ವಾನ್ ರಘುಪತಿ ಭಟ್, ಡಾ. ಜಿ.ವಿ. ಹೆಗಡೆ ಹಾಗೂ ಗಣಪತಿ ಭಟ್ಟ ವರ್ಗಾಸರ ಉಪನ್ಯಾಸ ನೀಡುವರು. ಗಂಟೆ 2-30ಕ್ಕೆ ಉಡುಪಿಯ ಹಿರಿಯ ಕವಿ ಪ್ರೊ. ಉಪೇಂದ್ರ ಸೋಮಯಾಜಿ ಇವರ ಅಧ್ಯಕ್ಷತೆಯಲ್ಲಿ ‘ಕೃಷ್ಣನ ಗುಂಗು’ ಕವಿಗೋಷ್ಠಿ ನಡೆಯಲಿದೆ.
ಇದೇ ಸಂದರ್ಭದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಉಡುಪಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಗೆ ‘ವಿಶ್ವಗೀತಾ ಅಭಿಯಾನ ಅಭಿಯೋಜಕ’ ಹಾಗೂ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರಿಗೆ ‘ವಿಶ್ವಗೀತಾ ಪರ್ಯಾಯ ಕೃಷ್ಣಾನುಗ್ರಹ’ ಗೌರವ ಪ್ರಶಸ್ತಿಯನ್ನು ಹಿರಿಯ ಉದ್ಯಮಿ ವಿಶ್ವನಾಥ ಶೆಣೈ ಪ್ರದಾನ ಮಾಡಲಿರುವರು.