ಹೆಬ್ರಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಘಟಕ ಮತ್ತು ಪ್ರಥಮ ದರ್ಜೆ ಕಾಲೇಜು ಹೆಬ್ರಿಯ ಕನ್ನಡ ವಿಭಾಗದ ಸಹಯೋಗದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನಾ ದಿನಾಚರಣೆ ಮತ್ತು ಉಪನ್ಯಾಸ ಕಾರ್ಯಕ್ರಮವು ದಿನಾಂಕ 06-05-2024 ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎ.ವಿ. ಹಾಲ್ ನಲ್ಲಿ ನಡೆಯಿತು.
ಕ.ಸಾ.ಪ ಹೆಬ್ರಿ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀನಿವಾಸ ಭಂಡಾರಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಸುರೇಶ ಮರಕಾಲ ಉದ್ಘಾಟಿಸಿ ವ್ಯಕ್ತಿತ್ವ ವಿಕಸನದಲ್ಲಿ ಸಾಹಿತ್ಯದ ಪಾತ್ರ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಬಳಿಕ ಮಾತನಾಡಿದ ಅವರು “ಸಾಹಿತ್ಯ ಕೃತಿಗಳ ಓದು ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತದೆ. ಒಬ್ಬ ಉತ್ತಮ ಕೇಳುಗ ಉತ್ತಮ ಭಾಷಣಕಾರನಾಗಬಲ್ಲ, ಒಬ್ಬ ಉತ್ತಮ ಓದುಗ ಉತ್ತಮ ಬರಹಗಾರನಾಗಬಲ್ಲ. ಉತ್ತಮ ಪುಸ್ತಕಗಳು ಬದುಕಿಗೆ ಪ್ರೇರಣೆಯನ್ನು ನೀಡುತ್ತವೆ. ಮಾರ್ಗದರ್ಶನ ಮಾಡುತ್ತವೆ. ನಿರಂತರ ಓದು ಬದುಕನ್ನು ರೂಪಿಸುತ್ತವೆ.” ಎಂಬುವುದನ್ನು ತಮ್ಮದೇ ಬದುಕಿನ ಉದಾಹರಣೆಗಳ ಮೂಲಕ ವಿವರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಐ. ಕ್ಯೂ. ಎ. ಸಿ. ಸಂಚಾಲಕರಾದ ಶ್ರೀಮತಿ ಆಶಾಲತಾ ಬಿ, ಖ್ಯಾತ ಲೇಖಕಿ ಶ್ರೀ ಮುದ್ರಾಡಿ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಪ್ರವೀಣ್ ಕುಮಾರ್ ಎಸ್. ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸುಮಲತಾ ಕಾರ್ಯಕ್ರಮವನ್ನು ನಿರೂಪಿಸಿದರು. ಕಸಾಪ ಹೆಬ್ರಿ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಮಂಜುನಾಥ ಕೆ. ಶಿವಪುರ ಸ್ವಾಗತಿಸಿ ಪದಾಧಿಕಾರಿ ಮಹೇಶ ಹೈಕಾಡಿ ಧನ್ಯವಾದವಿತ್ತರು.
Subscribe to Updates
Get the latest creative news from FooBar about art, design and business.
ಕಸಾಪ ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಘಟಕದಿಂದ 110ನೇ ಸಂಸ್ಥಾಪನಾ ದಿನಾಚರಣೆ ಮತ್ತು ಉಪನ್ಯಾಸ ಕಾರ್ಯಕ್ರಮ
No Comments1 Min Read
Previous Article‘ಚಿಣ್ಣರ ಮೇಳ 2024’ ಮಕ್ಕಳ ಬೇಸಿಗೆ ಶಿಬಿರ | ಮೇ 10ರಿಂದ 30